

ಚಿತ್ರದುರ್ಗ: ಕನ್ನಡ ಕರುಳಿನ ಭಾಷೆ ಜತೆಗೆ ಅನ್ನದ ಭಾಷೆ ಕೂಡ ಆದಾಗ ಮಾತ್ರ ಕನ್ನಡಿಗರು ಸ್ವಾಭಿಮಾನದಿಂದ ಬದುಕಲು ಸಾಧ್ಯವೆಂದು ಸಾಹಿತಿ ಡಾ.ಬಿ.ಎಲ್.ವೇಣು ಹೇಳಿದರು.
ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಹತ್ತು ಬೆಳದಿಂಗಳು ಹಾ ಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ,ಕರ್ನಾಟಕಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದಕ್ಕೆ ಕನ್ನಡಿಗರೆಲ್ಲ ರೂ ಖುಷಿ ಪಡ ಬೇಕು. ಕನ್ನಡಕ್ಕೆ ಅಂತಹ ತಾಕತ್ತು,ಶಕ್ತಿಯಿದೆ.
ಇಲ್ಲಿ ಜ್ಞಾನ,ಅರಣ್ಯ,ಖನಿಜ,ಪ್ರಾಣಿ,ಪಕ್ಷಿಗಳ ಸಂಪತ್ತಿದ್ದರೂ ಕನ್ನಡಿಗರು ಪರಭಾಷಿಕರ ದೌರ್ಜನ್ಯದ ನಡುವೆ ಬದುಕು ವಂತಾಗಿದೆ. ಕನ್ನಡ ನಾಡಿನಲ್ಲಿ ಕನ್ನಡಿಗರನ್ನು ಹುಡುಕುವಂಥ ಹೀನಾಯ ಪರಿಸ್ಥಿತಿ ಇದ್ದರೂ,ಇದನ್ನು ಸಹಿಸಿಕೊಂಡು ಕನ್ನಡಿಗರು ನಿರಾಭಿಮಾನಿ ಗಳಾಗಿ ರುವುದು ನೋವಿನ ಸಂಗತಿಯಾಗಿದೆ.
ಸರ್ಕಾರಗಳು ಕನ್ನಡಿಗರ ಮೇಲೆ ಹಿಂದಿ,ಇಂಗ್ಲಿಷ್ ಭಾಷೆಗಳನ್ನು ಹೇರುತ್ತಿವೆ,ಉದ್ಯೋಗ,ಶಿಕ್ಷಣಕ್ಕೆ ಕನ್ನಡಿಗರಿಗೆ ಕನ್ನಡ ಮೊದಲ ಆದ್ಯತೆ ಯಾಗಬೇಕು.ಕಾವೇರಿ,ಕೃಷ್ಣ ನದಿ ನೀರನ್ನು ಕುಡಿಯಲು ಬೇರೆಯವರ ಅಪ್ಪಣೆ ಪಡೆಯುವಂತಾಗಿದ್ದರೂ ಪ್ರತಿಭಟಿಸುವ ಹಕ್ಕನ್ನು ಕನ್ನಡಿಗರು ಕಳೆದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ,ಕಾನ್ವೆಂಟ್‌ಗಳು ತಲೆ ಎತ್ತುತ್ತಿವೆ.
ಕೇಂದ್ರ ಸರ್ಕಾರ ಎಲ್ಲವನ್ನು ಖಾಸಗಿಕರಣಗೊಳಿಸಲು ಹೊರಟಿದೆ. ರೈಲ್ವೆ,ಅಂಚೆ ಕಚೇರಿ,ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವವವರು ಕಡಿಮೆ ಇದ್ದಾರೆ. ಟಿವಿ,ಮೊಬೈಲ್‌ಗಳಿಂದ ಮಕ್ಕಳು ಬಾಂಧ್ಯವ ಕಳೆದುಕೊಂಡಿದ್ದಾರೆ. ಕನ್ನಡದಲ್ಲಿ ಓದಿದವರಿಗೆ ಮಾತ್ರ ಕೆಲಸ ಎನ್ನುವ ಕಾನೂನು ಜಾರಿಗೆ ಬರಬೇಕು.
ಗ್ರಾಮೀಣ ಪ್ರದೇಶದಲ್ಲಿ ಇನ್ನು ಕನ್ನಡ ಉಳಿದಿದೆ. ನವೆಂಬರ್ ಕನ್ನಡಿಗರಾಗುವ ಬದಲು ವರ್ಷವಿಡಿ ಕನ್ನಡ ಹಬ್ಬ ಆಚರಿಸುವ ಮೂ ಲಕ ಕನ್ನಡವನ್ನು ಉಳಿಸಿ ಬೆಳೆಸೋಣವೆಂದರು. ಉಪ ಪ್ರಾಂಶುಪಾಲ ಎಚ್.ಎನ್.ಶಿವಕುಮಾರ್ ಹೆಚ್.ಎನ್. ಪ್ರಾಸ್ತಾವಿಕವಾಗಿ ಮಾತ ನಾಡಿದರು. ಬಾಪೂಜಿ ಸಮೂಹ ಸಂಸ್ಥೆಗಳ ಕಾರ‌್ಯದರ್ಶಿ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ‌್ಯೆ ಪ್ರೊ. ಎಂ.ಆರ್.ಜಯಲಕ್ಷ್ಮೀ ಡಯಟ್ ಉಪನ್ಯಾಸಕ ಪ್ರಶಾಂತ್‌ಕುಮಾರ್ ಇದ್ದರು.