

ಹಂದಿಗುಂದ: ಪಡೆದ ಸಾಲ ಸರಿಯಾಗಿ ವಿನಿಯೋಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ ಹೇಳಿದರು.
ಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 80ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.
ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್.ನಾಯಿಕ ಮಾತನಾಡಿ, ಸಂಘ 9.27 ಕೋಟಿ ರೂ. ದುಡಿಯುವ ಬಂಡವಾಳ, 926 ಷೇರುದಾರರು, 1.37 ಲಕ್ಷ ರೂ. ಠೇವಣಿ, 7.13 ಕೋಟಿ ರೂ. ಸಾಲ ವಿತರಣೆ, 59.04 ಲಕ್ಷ ರೂ. ನಿಧಿ, 72.22 ಲಕ್ಷ ರೂ. ಬಂಡವಾಳ ಹೊಂದಿದ್ದು, 6 ಲಕ್ಷ ರೂ. ಲಾಭವಾಗಿದೆ ಎಂದರು.
ಗುರುಲಿಂಗಯ್ಯ ಹಿರೇಮಠ, ನಿರ್ದೇಶಕರಾದ ಎಂ.ಎಂ.ಅಂದಾನಿ, ಪರಶುರಾಮ ಚಿನಗುಂಡಿ, ಮುತ್ತಪ್ಪ ಉಳ್ಳಾಗಡ್ಡಿ, ಶಾಂತವ್ವ ಹೊಸಪೇಟೆ, ಮಹಾನಂದ ಅಂದಾನಿ, ಮಾರುತಿ ಮೇಟಿ, ಕೃಷ್ಣಪ್ಪ ಮಂಟೂರ, ಸಿದ್ದಗೌಡ ಪಾಟೀಲ, ರಾಮಪ್ಪ ತಳವಾರ, ಪರಪ್ಪ ಚಿನಗುಂಡಿ, ರುದ್ರಪ್ಪ ಭದ್ರಶೆಟ್ಟಿ, ಶ್ರೀಶೈಲ ಮಿರ್ಜಿ ಇತರರಿದ್ದರು. ಬಿ.ಎಸ್.ನಾಯಿಕ ನಿರೂಪಿಸಿದರು. ಎಂ.ಬಿ.ಬಿಸಗುಪ್ಪಿ ವಂದಿಸಿದರು.