ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಬೆಳೆಸಿ

20230310_112413565-07
Published on

ಚಿತ್ರದುರ್ಗ:ಚಿಕ್ಕನಿಂದಲೇ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಬೆಳೆಸುವ ಹೊಣೆ ಪಾಲಕರೊಂದಿಗೆ ಶಿಕ್ಷಕರ ಮೇಲೂ ಇದೆ ಎಂದು ಡಿ ಡಿಪಿಐ ಕೆ.ರವಿ ಶಂಕರೆಡ್ಡಿ ಹೇಳಿದರು. ನಗರದ ಪಾರ್ಶ್ವನಾಥ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾರದ ಪೂಜಾ ಕಾರ‌್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರವು ಹಿರಿದಾಗಿದೆ ಎಂದರು.

ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 623ಅಂಕ ಪಡೆದ ಶಾಲೆಯ ವಿದ್ಯಾರ್ಥಿ ಪುನೀತ್‌ನನ್ನು ಉಪ ನಿರ್ದೇಶಕರಾದ ರವಿಶಂಕರ್ ರೆಡ್ಡಿ ಸನ್ಮಾನಿಸಿದರು. ಸಂಸ್ಥೆ ಅಧ್ಯಕ್ಷ ಬಾಬುಲಾಲ್ ಪಟೀಯಾರ್,ಉಪಾಧ್ಯಕ್ಷ ಉತ್ತಮ್‌ಚಂದ್ ಸುರಾನ,ಕಾರ‌್ಯದರ್ಶಿ ಸತಾರ ಕುಮಾರ್,ಜಂಟಿ ಕಾರ‌್ಯದರ್ಶಿ ಸುರೇಶ್, ಖಂಜಾಚಿ ರಾಜೇಂದ್ರ ಇತರು ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net