ಜಿಲ್ಲೆಯಲ್ಲಿ ಡಿ.25ರವರೆಗೆ ಆತ್ಮ ನಿರ್ಭರ ಅಭಿಯಾನ

raichur
raichur
Published on

 ರಾಯಚೂರು ಪ್ರಧಾನಿ ನರೇಂದ್ರ ಮೋದಿಯವರು ಕನಸಿನ ಯೋಜನೆಯಾಗಿರುವ ಆತ್ಮ ನಿರ್ಭರ ಭಾರತ ಯೋಜನೆಯ ಕುರಿತು ಮನೆ ಮನೆಗೆ ಜನಜಾಗೃತಿ ಮೂಡಿಸಲು ಡಿಸೆಂಬರ್ 25 ರವರೆ ಜಿಲ್ಲೆಯಲ್ಲಿ ಆತ್ಮ ನಿರ್ಭರ ಅಭಿಯಾನ ನಡೆಸಲಾಗುತ್ತದೆಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.25 ರಿಂದ ಪ್ರಾರಂಭವಾಗಿರುವ ಅಭಿ ಯಾನದಲ್ಲಿ ಸ್ವದೇಶಿವಸ್ತುಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳನ್ನೇ ಬಳಸುವಮೂಲಕ ವಿದೇಶಿ ವಸ್ತುಗಳ ಬಳಕೆಯನ್ನು ನಿಲ್ಲಿಸಲು ಮನವರಿಕೆ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಚೀನಾ ಪಟಾಕಿ ಬಳಸದೇ ಕುಂಬಾರರು ತಯಾರಿಸುವ ದೀಪಗಳನ್ನು ಬಳಸುವದು ಸೇರಿದಂತೆ ಉತ್ಪಾದನೆಗೆ ಜನರು ಬೆಂಬಲಿಸುವಂತೆ ಮನವಿ ಮಾಡಿದರು.

ಅಭಿಯಾನದ ಜಿಲ್ಲಾ ಸಂಚಾಲಕ ಶಿವುಕುಮಾರ ಪಾಟೀಲ್ ಮಾತನಾಡಿ, ಆತ್ಮ ನಿರ್ಭರ ಭಾರತ ಅಭಿಯಾನದಲ್ಲಿ ಮೂರು ಅಂಶಗಳ ಮೇಲೆ ಪ್ರಚಾರ, ಜಾಗೃತಿ ಮೂಡಿಸಲಾಗುತ್ತದೆ. ಸ್ವದೇಶಿ, ಸುಭಾಷಾ, ಸುಭೂಷಣ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಆಯಾ ಜಿಲ್ಲೆಗಳ ಉತ್ಪನ್ನಗಳ ಬಳಕೆ, ಸ್ವದೇಶಿ ವಸ್ತುಗಳನ್ನು ಬಳಸುವ ಅವಶ್ಯಕತೆಯನ್ನು ತಿಳಿಸಲಾಗುತ್ತದೆ. ಮುದ್ರಾ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳು ಆತ್ಮ ನಿರ್ಭರ ಯೋಜನೆಯಡಿ ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಕೆ.ಎಂ.ಪಾಟೀಲ್, ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಉಟ್ಟೂರು, ಚಂದ್ರಶೇಖರ ಪಾಟೀಲ್, ಸಂತೋಷ ರಾಜಗುರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net