

ಉಳ್ಳಾಲ: ಆತ್ಮಶುದ್ಧೀಕರಣಕ್ಕೆ ಬದರ್ ಶುಅದಾಗಳ ನಿತ್ಯ ಸ್ಮರಣೆಯಿಂದ ಸಹಕಾರಿ ಎಂದು ಬೆಳ್ತಂಗಡಿ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಅಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಹೇಳಿದರು.
ದೇರಳಕಟ್ಟೆ ಜಲಾಲ್‌ಬಾಗ್ ಮಸ್ಜಿದುಲ್ ಅರಫಾ ಮತ್ತು ಮದರಸತುಲ್ ಅರಫಾ ಆಶ್ರಯದಲ್ಲಿ ಆಧ್ಯಾತ್ಮಿಕ ಸಂಗಮ ‘ಮಜ್ಲಿಸುನ್ನೂರ್’ ದ್ವಿತೀಯ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಮಾಅತ್ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಖತೀಬ್ ತಾಜುದ್ದೀನ್ ರ‌್ರಹ್ಮಾನಿ, ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಅರಫಾ ಮಸೀದಿ ಮಾಜಿ ಖತೀಬ್ ಹಂಝ ಫೈಝಿ, ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್, ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಆರ್.ಅಹ್ಮದ್ ಸೇಟ್, ಸಮಸ್ತ ಕೇರಳ ಮದ್ರಸಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ಕೆ.ಅಬೂಬಕ್ಕರ್, ಕಿನ್ಯ ರೇಂಜ್ ಉಪಾಧ್ಯಕ್ಷ ಮಹಮ್ಮದ್ ಹನೀಫ್ ಎಸ್.ವಿ, ಜತೆ ಕಾರ್ಯದರ್ಶಿ ಬಶೀರ್, ಅಡ್ಯಾರ್ ಕಣ್ಣೂರ್ ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರ್, ಸ್ಥಳೀಯ ಉದ್ಯಮಿಗಳಾದ ಪಿ.ಎಂ. ಇಬ್ರಾಹಿಂ ಕತಾರ್, ಡಿ.ಎಸ್.ರಫೀಕ್, ತಾಜುದ್ದೀನ್ ದೇರಳಕಟ್ಟೆ, ಅಶ್ರಫ್ ಬಿ.ಎಚ್., ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಮದರಸ ಮೇಲ್ವಿಚಾರಕ ಅಬ್ದುಲ್ ಲತೀಫ್ ಜಲಾಲ್‌ಬಾಗ್, ಮಸೀದಿ ಮುಅಝ್ಝಿನ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಮದರಸ ಮುಅಲ್ಲಿಮ್ ಫಾರೂಕ್ ಮುಸ್ಲಿಯಾರ್, ಜಮಾಅತ್ ಉಪಾಧ್ಯಕ್ಷ ಮಹಮ್ಮದ್ ಹನೀಫ್, ಕೋಶಾಧಿಕಾರಿ ಮಹಮ್ಮದ್ ಫಾರೂಕ್, ಆಡಳಿತ ಸಮಿತಿ ಸದಸ್ಯರಾದ ಹಮೀದ್ ಪಜೀರ್, ಅಬ್ದುಲ್ ರ್ರಹ್ಮಾನ್, ಹಮೀದ್ ಡ್ರೈವರ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ ಸ್ವಾಗತಿಸಿದರು. ಮಜ್ಲಿಸುನ್ನೂರ್ ಸಂಚಾಲಕ ಮಹಮ್ಮದ್ ಅಲಿ ವಂದಿಸಿದರು.