

ಕೊಳವಿ: ಒಂದು ಯೂನಿಟ್ ರಕ್ತ ಮೂರು ಜೀವ ಉಳಿಸಲು ಸಹಕಾರಿಯಾಗುತ್ತದೆ. ರಕ್ತದಾನದಿಂದ ಆರೋಗ್ಯ ವೃದ್ಧಿಸುತ್ತದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಗೋಕಾಕ ರೋಟರಿ ಸಂಸ್ಥೆ ಅಧ್ಯ ಡಾ.ಸಿದ್ದಣ್ಣ ಕಮತ ಹೇಳಿದರು.
ಸಮೀಪದ ಮಮದಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಹಾಗೂ ಸ್ಥಳಿಯ ವಿವಿಧೋದ್ದೇಶಗಳ ಸಹಕಾರಿ ಸಂದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ಥಳಿಯ ಚರಮೂರ್ತೀಶ್ವರ ಸ್ವಾಮೀಜಿ ಮಾತನಾಡಿ, ಗೋಕಾಕನ ರೋಟರಿ ಸಂಸ್ಥೆ ಹಾಗೂ ಲಯನ್ಸ್ ಸಂಸ್ಥೆಗಳ ಸಮಾಜಮುಖಿ ಕಾರ್ಯ ಶ್ಲಾನೀಯ ಎಂದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. 25 ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆಗೆ ನೆರವು ನೀಡಲಾಯಿತು.
ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಗ್ರಾಪಂ ಅಧ್ಯೆ ಅನ್ನಪೂರ್ಣ ಭಜಂತ್ರಿ, ಲಯನ್ಸ್ ಸಂಸ್ಥೆ ಅಧ್ಯ ಅಶೋಕ ಲಗಮಪ್ಪಗೊಳ, ಮಾಜಿ ಅಧ್ಯ ಡಾ.ಅಶೋಕ ಮುರುಗೋಡ, ಡಾ.ಶಂಕರ ತೇರದಾಳ, ಪಿಡಿಒ ವಿನಾಯಕ ಮಾಳಿ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ರಮೇಶ ಗಾಣಗಿ, ವೀರಭದ್ರ ಮೈಲನ್ನವರ, ಅಶೋಕ ಗೋಪಾಳಿ, ಶಂಕರಗೌಡ ಪಾಟೀಲ, ಶಿವಲಿಂಗಪ್ಪ ಕಮತ, ರವೀಂದ್ರ ದೇಮಶೆಟ್ಟಿ ಇತರರಿದ್ದರು.