ಸ್ವಸಹಾಯ ಸಂಘದ ಮಹಿಳೆಯರು ಸ್ವಾವಲಂಬಿ

.1
Published on

ಪಾವಗಡ: ಸ್ವ&ಸಹಾಯ ಸಂಘದ ಮಹಿಳೆಯರು ಸ್ವಯಂ ಉದ್ಯೋಗ ಕಂಡುಕೊಂಡು ಸ್ವಾವಲಂಬಿಗಳಾಗಬೇಕು. ಈ ನಿಟ್ಟಿನಲ್ಲಿ ಎನ್​ಆರ್​ಎಲ್​ಎಂ ಯೋಜನೆ ಅತ್ಯಂತ ಮಹತ್ವ ಪಡೆದಿದೆ ಎಂದು ತಹಸೀಲ್ದಾರ್​ ವರದರಾಜು ಹೇಳಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಜೀವಿನಿ ಮಾಸಿಕ ಸಂತೆ ಹಾಗೂ ದೀಪಾವಳಿ ಪ್ರಯುಕ್ತದ ದೀಪ ಸಂಜೀವಿನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಉದ್ಯಮಿಗಳಾಗಿ ಮುಂದುವರಿಯಲು ಸಂಜೀವಿನಿ ಸಂತೆಗಳು ಮಾಡಬೇಕು ಹಾಗೂ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು ಎಂದರು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜಾನಕೀರಾಮ್​ ಮಾತನಾಡಿ, ಮಹಿಳೆ ಕುಟುಂಬದ ಕಣ್ಣು. ನೀವುಗಳು ಸ್ವಉದ್ಯಮಗಳನ್ನು ಸ್ಥಾಪಿಸಿ ನಾವೀನ್ಯ

ಉತ್ಪನ್ನಗಳನ್ನು ತಯಾರಿಸಿ, ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳುವ ಸಂತೆ, ಜಿಲ್ಲಾ, ರಾಜ್ಯ ಮಟ್ಟದ ಮೇಳಗಳಲ್ಲಿ ಭಾಗವಹಿಸಲು ಅವಕಾಶವಿದೆ. ನಮ್ಮ ಸಮುದಾಯದ ಬಂಡವಾಳ ನಿಧಿ

ಪಡೆದು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕೂಲ ಪಡೆದುಕೊಳ್ಳಬೇಕು. ಮಹಿಳೆ ಸ್ವಾವಲಂಬಿಯಾಗಿ ಬದುಕಿ ತನ್ನ ಕುಟುಂಬ ಅಭಿವೃದ್ಧಿ ಸಾಧಿಸಬೇಕು ಎಂದರು.

ನಂತರ ವಿವಿಧ ಬಗೆಯ ಮಹಿಳೆಯರ ಉತ್ಪನ್ನ, ವ್ಯಾಪಾರದ ವಸ್ತುಗಳ ವೀಕ್ಷಣೆ ಮಾಡಿದರು. ಉತ್ಪನ್ನಗಳಾದ ಅಡಿಕೆ, ಪ್ಲಾಸ್ಟಿಕ್​ ತಟ್ಟೆ, ಸಿಹಿ ತಿನುಸುಗಳು, ಹೂವಿನ ಹಾರಗಳು, ರೇಷ್ಮೆ ಸೀರೆ, ಮಣ್ಣಿನ ದೀಪಗಳು, ವಸ್ತ್ರಗಳು ಸೇರಿ ಇತರ ಇದ್ದವು. ಸಾಧನ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯೆ ಲತಾ,

ಕಾರ್ಯದರ್ಶಿ ಸುಶೀಲಮ್ಮ, ಎನ್​ಆರ್​ಎಲ್​ಎಂ ಸಿಬ್ಬಂದಿ ರಮೇಶ ಬಾಬು, ಶಿವಣ್ಣ, ವಿಜಯ್​, ಸರಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net