ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಿ

130820 Sindhanuru Organations Apeal for Loan Cancel
ಸ್ವಸಹಾಯ ಸಂಘಗಳ ಎಲ್ಲ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಭಗತ್‌ಸಿಂಗ್, ಸಾವಿತ್ರಿಬಾಯಿ ಫುಲೆ ಹಾಗೂ ಅಂಬೇಡ್ಕರ್ ಬಿಗ್ರೇಡ್‌ದಿಂದ ಸಿಂಧನೂರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Published on

ಸಿಂಧನೂರು: ಸ್ವಸಹಾಯ ಸಂಘಗಳ ಎಲ್ಲ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಭಗತ್‌ಸಿಂಗ್, ಸಾವಿತ್ರಿಬಾಯಿ ಫುಲೆ ಹಾಗೂ ಅಂಬೇಡ್ಕರ್ ಬಿಗ್ರೇಡ್‌ದಿಂದ ತಹಸೀಲ್ದಾರ್‌ಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಲಾಕ್‌ಡೌನ್ ಸಮಯದಲ್ಲಿ ಒಂದು ಲಕ್ಷದ ಮೊತ್ತದವರೆಗಿನ ಸಾಲದ ಕಂತುಗಳು, ಅದು ಸರ್ಕಾರದಿಂದ, ಮೈಕ್ರೋ ಫೈನಾನ್ಸ್, ಯಾವುದೇ ಬ್ಯಾಂಕ್‌ದಿಂದ ಪಡೆದಿದ್ದರೂ ಮನ್ನಾ ಮಾಡಬೇಕು. ಸಣ್ಣ ಪ್ರಮಾಣದ ಸಾಲಗಳ ಕಂತುಗಳ ವಸೂಲಿಯನ್ನು 2021ರ ಮಾ.31 ವರೆಗೆ ತಡೆ ಹಿಡಯಬೇಕು. ಸ್ವಸಹಾಯ ಸಂಘಗಳ ಮಹಿಳೆಯರಿಗೆ ಉದ್ಯೋಗ ಖಾತ್ರಿಗೊಳಿಸಬೇಕು. ಅವರ ಉತ್ಪನ್ನವನ್ನು ಸರ್ಕಾರವೇ ಖರೀದಿಸುವ ವ್ಯವಸ್ಥೆ ಆಗಬೇಕು. ಒಂದು ಲಕ್ಷದವರೆಗಿನ ಮೊತ್ತದ ಸಾಲವನ್ನು ಬಡ್ಡಿ ರಹಿತ ಸಾಲವೆಂದು ಪರಿವರ್ತಿಸಬೇಕು. ವಿದ್ಯಾಭ್ಯಾಸದ ಸಾಲವನ್ನು ಬಡ್ಡಿ ರಹಿತ ಸಾಲವೆಂದು ಪರಿಗಣಿಸಬೇಕು. ಸ್ವಯಂ ಉದ್ಯೋಗ ನಡೆಸುವವರಿಗೆ 10 ಲಕ್ಷ ರೂ. ಸಾಲಕ್ಕೆ ಶೇ.4 ಬಡ್ಡಿ ದರ ನಿಗದಿಪಡಿಸಬೇಕೆಂದು ಒತ್ತಾಯಿಸಲಾಯಿತು.

ಮುಖಂಡರಾದ ನಾಗರಾಜ ಪೂಜಾರ, ಬಿ.ಎನ್.ಯರದಿಹಾಳ, ಬಸವರಾಜ ಎಕ್ಕಿ, ಮಹಾದೇವ, ರಾಘವೇಂದ್ರ ಉಪ್ಪಳ, ಮಲ್ಲಿಕಾರ್ಜುನ ಕುರುಗೋಡ, ಅಮೀನಸಾಬ, ಮಾರಿಯಪ್ಪ, ಅಂಬಿಕಾ, ಸಿದ್ದಮ್ಮ, ಶಾಂತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net