

ಆರ್.ಕೃಷ್ಣ ಮೈಸೂರು
ಲಿಂಗತ್ವ ಅಲ್ಪಸಂಖ್ಯಾತರು ಎಂದರೆ ಭಿಕ್ಷಾಟನೆ ಮಾಡಿ ಜೀವನ ನಡೆಸುವವರು, ಅವರು ದುಡಿಯುವುದಿಲ್ಲ ಎನ್ನುವ ಅಪವಾದವನ್ನು ಹೋಗಲಾಡಿಸಲು ಈಗ ಸ್ವ-ಸಹಾಯ ಸಂಘ ಕಟ್ಟಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಲು ಮುಂದಾಗಿದ್ದಾರೆ. ಸಮಾನ ಮನಸ್ಸಿನ ಲಿಂಗತ್ವ ಅಲ್ಪಸಂಖ್ಯಾತರು ಸೇರಿಕೊಂಡು ‘ಆದರ್ಶ’ ಸ್ವಸಹಾಯ ಸಂಘ ಆರಂಭಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಜಿಲ್ಲೆಂುಲ್ಲಿ 1,800 ಲಿಂಗತ್ವ ಅಲ್ಪಸಂಖ್ಯಾತರಿದ್ದು, ನಗರದಲ್ಲಿಂೆುೀ ಹೆಚ್ಚಿನ ಸಂಖ್ಯೆಂುಲ್ಲಿ ವಾಸವಾಗಿದ್ದಾರೆ. ಸಾಕಷ್ಟು ಮಂದಿ ಭಿಕ್ಷಾಟನೆಂುಲ್ಲಿ ತೊಡಗಿದ್ದರೂ ಬಹುಪಾಲು ಲಿಂಗತ್ವ ಅಲ್ಪಸಂಖ್ಯಾತರು ಒಲ್ಲದ ಮನಸ್ಸಿನಿಂದ ಭಿಕ್ಷಾಟನೆಯಲ್ಲಿ ಮಾಡುತ್ತಿದ್ದಾರೆ. ತಮ್ಮದೊಂದು ಬದುಕು ಕಟ್ಟಿಕೊಳ್ಳಬೇಕು, ಸ್ವ-ಉದ್ಯೋಗ ಮತ್ತು ಸ್ವ ವ್ಯವಹಾರದಿಂದ ಸ್ವಾವಲಂಬಿ ಬದುಕು ನಡೆಸಬೇಕು ಎಂದು ಕನಸು ಕಾಣುತ್ತಿದ್ದಾರೆ. ಇಂತಹವರಿಗೆ ಆರ್ಥಿಕ ಬೆಂಬಲ ನೀಡುವುದು ಸ್ವ ಸಹಾಯ ಸಂಘದ ಉದ್ದೇಶವಾಗಿದೆ.
ಸಾಮಾನ್ಯವಾಗಿ ಸಿಗ್ನಲ್‌ನಲ್ಲಿ ಭಿಕ್ಷಾಟನೆ ಮಾಡುತ್ತಾ ಆ ಹಣದಿಂದಲೇ ಬಹಳಷ್ಟು ಲಿಂಗತ್ವ ಅಲ್ಪಸಂಖ್ಯಾತರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹಲವರು ಅವರನ್ನು ಅಪಹಾಸ್ಯ, ವ್ಯಂಗ್ಯದಿಂದ ರೇಗಿಸುತ್ತಾರೆ. ಇಂತಹ ಅವಮಾನದ ವಿರುದ್ಧ ಸಿಡಿದ ಈ ಸಮುದಾಯದ ಹಲವರು ಸ್ವ-ಸಹಾಯ ಸಂಘ ಸ್ಥಾಪಿಸುವ ಮೂಲಕ ಗೌರವಯುತವಾದ ಸ್ವಾವಲಂಬನೆ ಬದುಕಿನತ್ತ ದೃಢ ಹೆಜ್ಜೆ ಇಟ್ಟಿದಾರೆ.
ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಜತೆಗೆ ದೊಡ್ಡ ಮನಸ್ಸಿನಿಂದ ಕೆಲಸ ಕೊಡುವುದು ವಿರಳ. ಭಿಕ್ಷಾಟನೆ ಅನಿವಾರ್ಯವಾಗಿದೆ. ಇವರಿಗೆಲ್ಲ ಆರ್ಥಿಕ ನೆರವು ದೊರೆತರೆ ಭಿಕ್ಷಾಟನೆಯಿಂದ ದೂರ ಸರಿಯಬಹುದು. ಹೀಗಾಗಿ ಲಿಂಗತ್ವ ಅಲ್ಪ ಸಂಖ್ಯಾತರಾದ ಪ್ರಣತಿ ಪ್ರಕಾಶ್ ಮತ್ತು ಶಿವರಾಮ್ ಅವರು 2023ರ ಜುಲೈನಲ್ಲಿ ‘ಆದರ್ಶ ಲಿಂಗತ್ವ ಅಲ್ಪಸಂಖ್ಯಾತರ ಸ್ವ ಸಹಾಂು ಸಂಘ’ ರಚಿಸಿ 15 ಮಂದಿಂುನ್ನು ಸಂಘದ ಸದಸ್ಯರನ್ನಾಗಿ ವಾಡಿದರು.
15 ಸದಸ್ಯರಲ್ಲಿ ಈಗಾಗಲೇ 12 ಸದಸ್ಯರಿಗೆ ತಲಾ 10 ಸಾವಿರ ರೂ.ನಂತೆ 1.2 ಲಕ್ಷ ರೂ.ಸಾಲ ನೀಡಲಾಗಿದ್ದು, ಈ ಹಣದಲ್ಲಿ ಆರು ಮಂದಿ ಕುರಿ, ಮೇಕೆಗಳನ್ನು ಖರೀದಿಸಿ ಸ್ವಾವಲಂಬಿ ಜೀವನ ನಡೆಸಲು ಮುಂದಾಗಿರುವುದು ಇತರರರಿಗೆ ಮಾದರಿಯಾಗಿದೆ.
ಸರ್ಕಾರದಿಂದ ಗುರುತಿನ ಚೀಟಿ:
ಸರ್ಕಾರ ನೀಡುವ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಂುನ್ನು ಕೇವಲ 90 ಮಂದಿ ಪಡೆದಿದ್ದು, ಅವರು ವಾತ್ರ ಸರ್ಕಾರದ ಮೈತ್ರಿ ಮತ್ತು ಗೃಹಲಕ್ಷ್ಮಿ ಂೋಜನೆಂುಡಿ ವಾಸಾಶನ ಪಡೆಂುುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ ನಿರೀಕ್ಷಿತ ಪ್ರವಾಣದಲ್ಲಿ ಸಾಲ ಸೌಲಭ್ಯವೂ ಸಿಕ್ಕಿಲ್ಲ. ಈ ಹಿನ್ನೆಲೆಂುಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಂಘಟಿತರಾದ 15 ಲಿಂಗತ್ವ ಅಲ್ಪಸಂಖ್ಯಾತರು ಆರ್ಥಿಕವಾಗಿ ಸದೃಢರಾಗಲು ಒಟ್ಟಿನಿಂದ ಮುನ್ನುಗ್ಗಿದ್ದಾರೆ.
2.5 ಲಕ್ಷ ರೂ.ಸಂಗ್ರಹ: ಪ್ರತಿ ತಿಂಗಳು ಎಲ್ಲರೂ ಸಂಘದ ಹೆಸರಿನಲ್ಲಿ ಒಂದು ಸಾವಿರ ರೂ. ಉಳಿತಾಂು ವಾಡುತ್ತಿದ್ದಾರೆ. 2.5 ಲಕ್ಷ ರೂ.ಗಳವರೆಗೆ ಹಣವನ್ನು ಕಳೆದ 16 ತಿಂಗಳಲ್ಲಿ ಸಂಗ್ರಹಿಸಲಾಗಿದೆ. ಸದಸ್ಯರೇ ಸಾಲ ಪಡೆದು ಸಕಾಲಕ್ಕೆ ಮರು ಪಾವತಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್ ಅಥವಾ ನಿಗಮದಿಂದ ಸಾಲ ಪಡೆಯುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಮುಂದೆ ಉದ್ದಿಮೆ ಆರಂಭಿಸುವ ಉದ್ದೇಶ ಸಂಘದ ಸದಸ್ಯರಿಗಿದೆ.
ಸಹಕಾರ ಸಂಘ ಸ್ಥಾಪಿಸುವ ಗುರಿ
ಸಮಾಜದಿಂದ ನಿರ್ಲಕ್ಷೃಕ್ಕೆ ಒಳಗಾಗಿರುವ ಸಮುದಾಯ ಆರ್ಥಿಕವಾಗಿ ಸಬಲೀಕರಣಗೊಳಿಸಿ ಸ್ವಾವಲಂಬಿಗಳಾಗಿಸಬೇಕು ಎಂಬ ಸದುದ್ದೇಶದಿಂದ ಲಿಂಗತ್ವ ಅಲ್ಪಸಂಖ್ಯಾತರ ಸ್ವ-ಸಹಾಯ ಸಂಘ ‘ಆದರ್ಶ’ವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘ, ಉದ್ದಿಮೆ ಸ್ಥಾಪಿಸುವ ಗುರಿ ಇದೆ.
ಶಿವರಾಮ್, ಕಾರ್ಯದರ್ಶಿ, ಆದರ್ಶ ಲಿಂಗತ್ವ ಅಲ್ಪಸಂಖ್ಯಾತರ ಸ್ವಸಹಾಯ ಸಂಘ