

ಇಟಗಿ: ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಯುವಜನತೆ ಅಳವಡಿಸಿಕೊಳ್ಳುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಗ್ರಾಮದ ಸೋನಪ್ಪನವರ ಓಣಿಯಲ್ಲಿ ಛತ್ರಪತಿ ಶಿವಾಜಿ ಯುವಕ ಮಂಡಲ, ವಿಶ್ವ ಹಿಂದು ಪರಿಷತ್, ಬಜರಂಗದಳದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿಯ ಉಳಿವಿಗೆ ಮಹಾನ್ ಕೊಡುಗೆ ನೀಡಿದ ಮಹಾಪುರುಷ ಶಿವಾಜಿಯನ್ನು ಸ್ಮರಿಸಲು ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿದ ಇಟಗಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಶಾಸಕ ಅರವಿಂದ ಪಾಟೀಲ, ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಮಾತನಾಡಿದರು. ಚನ್ನಬಸವದೇವರು, ಶಿವಪುತ್ರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ, ವಕೀಲ ಅದೃಶ್ಯ ಸೋನಪ್ಪನವರ, ವಿಠ್ಠಲ ಹಿಂಡಲಕರ, ಉದಯ ಕರಡಿ, ಚೇತನ ಸೋನಪ್ಪನವರ, ಸಂಜೀವ ಸೋನಪ್ಪನವರ, ಕೇದಾರಿ ಸೋನಪ್ಪನವರ, ಭೀಮಪ್ಪ ಸೋನಪ್ಪನವರ, ಜ್ಯೋತಿಬಾ ಸೋನಪ್ಪನವರ ಇತರರು ಇದ್ದರು.