ಜೆಡಿಎಸ್‌ನಿಂದ ಸ್ವಾಭಿಮಾನ ಜಾಗೃತಿ ಕಾರ್ಯಕ್ರಮ

JDS
ಹಾನಗಲ್ಲಿನಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಚಾಲನೆ ನೀಡಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ದಬಸಪ್ಪ ಯಾದವ, ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ಈರಣ್ಣ ನವಲಗುಂದ, ರಾಜ್ ಪಠಾಣ, ಕತ್ತಲಸಾಬ ಬಣಕಾರ, ಜ್ಯೋತಿ ಚಿಗಳ್ಳಿ, ಗೌಸಮೊದಿನ್ ಆಲದಕಟ್ಟಿ, ಮುತ್ತಪ್ಪ ಪವಾಡಿ ಇದ್ದರು.
Published on

ಹಾನಗಲ್ಲ: ಹಾವೇರಿ ಜಿಲ್ಲಾ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಹಾನಗಲ್ಲ ವಿಧಾನಸಭಾ ಕ್ಷೇತ್ರದಿಂದ ಚಾಲನೆ ನೀಡಲಾಗಿದ್ದು, ಹಾನಗಲ್ಲ ಕ್ಷೇತ್ರಕ್ಕೆ ಸ್ಥಳೀಯರನ್ನೇ ಶಾಸಕರನ್ನಾಗಿ ಆಯ್ಕೆ ಮಾಡುವ ಸ್ವಾಭಿಮಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಡೀ ಜಿಲ್ಲೆಯಲ್ಲಿ ಬೂತ್ ಮಟ್ಟದ ಸದಸ್ಯತ್ವ ಅಭಿಯಾನವನ್ನು ನಡೆಸಲಾಗುತ್ತದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯರೇ ವಿಧಾನಸಭೆ ಸದಸ್ಯರಾಗಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಅದಕ್ಕಾಗಿ ಶಿಗ್ಗಾವಿಯಲ್ಲಿ ನಡೆಯುವ ವಿಧಾನಸಭಾ ಉಪಚುನಾವಣೆಗೂ ನಮ್ಮ ಪಕ್ಷದ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನ ನಡೆದಿದೆ. ಹಾನಗಲ್ಲ ತಾಲೂಕಿನಲ್ಲೂ ಮುಂದಿನ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಿ ಕಣಕ್ಕಿಳಿಸುವಂತೆ ಮೈತ್ರಿ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಲಾಗುವುದು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರಿಗೆ ಹಾವೇರಿ ಜಿಲ್ಲೆಯಲ್ಲಿ ಕಾರ್ಖಾನೆ ಆರಂಭಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲು ಒತ್ತಾಯಿಸಲಾದೆ. ಈ ಕುರಿತು ಅವರಿಂದ ಸಕಾರಾತ್ಮಕ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ದಬಸಪ್ಪ ಯಾದವ ಮಾತನಾಡಿ, ಮೊದಲ ಹಂತದಲ್ಲಿ ಪ್ರತಿ ತಾಲೂಕಿನಿಂದ ಸಾವಿರ ಹೊಸ ಸದಸ್ಯತ್ವ ನಮ್ಮ ಗುರಿಯಾಗಿದ್ದು, ಎರಡನೇ ಹಂತದಲ್ಲಿ ಬೂತ್ ಮಟ್ಟದ ಮೂಲಕ ದೊಡ್ಡ ಸಂಖ್ಯೆಯಲ್ಲಿ ಸದಸ್ಯತ್ವಕ್ಕೆ ಮುಂದಾಗುತ್ತೇವೆ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ರಾಜ್ ಪಠಾಣ, ಕತ್ತಲಸಾಬ ಬಣಕಾರ, ಜ್ಯೋತಿ ಚಿಗಳ್ಳಿ, ಪವಿತ್ರಾ, ಅಮಿರಖಾನ ಬೇಪಾರಿ, ಮೂಕಪ್ಪ ಪಡೆಪ್ಪನವರ, ಚಂದ್ರಪ್ಪ ಕ್ಯಾಸನೂರ, ಈರಣ್ಣ ನವಲಗುಂದ, ಸಲೀಮ ಸಮನವಳ್ಳಿ, ನಂದೀಶ ಕ್ಷೌರದ, ಗೌಸಮೊದಿನ್ ಆಲದಕಟ್ಟಿ, ಮುತ್ತಪ್ಪ ಪವಾಡಿ, ಸೋಮಣ್ಣ ನೀರಲಗಿ, ಎಸ್.ಎಸ್. ಹಿರೇಮಠ, ಮಂಜಪ್ಪ ಪಡೆಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net