

ಹೊಳೆನರಸೀಪುರ: ಪ್ರಕೃತಿಯನ್ನು ರಕ್ಷಿಸಬೇಕಾದ ಇಂದಿನ ಅನಿವಾರ್ಯ ಪರಿಸ್ಥಿತಿಯಲ್ಲಿ ಸೋಲಾರ್ ಬಳಕೆ ಅತ್ಯಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲೂಕು ಘಟಕದ ಯೋಜನಾಧಿಕಾರಿ ಸುಮಿತ್ರಾ ಜೈನ್ ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ಗುರುವಾರ ಯೋಜನೆ ವತಿಯಿಂದ ಆಯೋಜಿಸಿದ್ದ ಸೋಲಾರ್ ಆಧಾರಿತ ಸ್ವಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೆರಾಕ್ಸ್, ಕುಲುಮೆ, ಹಾಲು ಕರೆಯುವುದು, ಚಪಾತಿ ಮತ್ತು ಹಪ್ಪಳ ತಯಾರಿಕೆ ಯಂತ್ರ, ಫೋಟೋಗ್ರಫಿ ಸೇರಿ ಇತರ ಸ್ವಉದ್ಯೋಗದ ಜತೆ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೊಡ್ಡಕುಂಚೆವು ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ದಿವ್ಯಾ, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಹನು ಮಂತಪ್ಪ, ನಂಜೇಗೌಡ, ರುದ್ರಪ್ಪ, ಅಶ್ವಿನಿ ಇದ್ದರು.