

ಚಿಕ್ಕಮಗಳೂರು: ಪ್ರತಿಯೊಬ್ಬರು ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆದಾಗ ಸ್ವ ಉದ್ಯೋಗವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ತಮ್ಮ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಆರ್‌ಎಲ್‌ಎಂನ ಜಿಲ್ಲಾ ಕೌಶಲ್ಯ ವ್ಯವಸ್ಥಾಪಕ ರಾಜೇಶ್ ತಿಳಿಸಿದರು.
ನಗರದ ಯೂನಿಯನ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿAದ ಆಯೋಜಿಸಿದ್ದ ವಿಶ್ವ ಕೌಶಲ್ಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಿರುದ್ಯೋಗವು ಒಂದು ಸಾಮಾಜಿಕ ಪಿಡುಗಾಗಿ ಗೋಚರಿಸುತ್ತಿದೆ. ಯುವ ಜನತೆಯು ಯಾವುದೇ ಒಂದು ವಿಷಯದಲ್ಲಿ ಕೌಶಲ್ಯ ತರಬೇತಿಯನ್ನು ಪಡೆದು ಉದ್ಯೋಗಕ್ಕಾಗಿ ಅಲೆಯದೆ ಸ್ವ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಪ್ರತಿಯೊಬ್ಬರೂ ಕೌಶಲ್ಯವನ್ನು ಕಲಿಯುವುದರ ಮೂಲಕ ಸ್ವ ಉದ್ಯೋಗದತ್ತ ಹೆಚ್ಚು ಗಮನಹರಿಸಿ ಎಂದರು.
ಎಸ್‌ಆರ್‌ಎಲ್‌ಎA ಅಭಿಯಾನ ಯೋಜನೆಯ ಎಐಎಸ್ ಅಧಿಕಾರಿ ಭರತ್ ಮಾತನಾಡಿ, ಜನಸಂಖ್ಯೆ ಸ್ಪೋಟವೂ ನಿರುದ್ಯೋಗಕ್ಕೆ ಒಂದು ಕಾರಣವಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇಕಡ ೩೦ ರಿಂದ ೪೦ರಷ್ಟು ಯುವ ಜನತೆ ಇದ್ದು, ಉದ್ಯೋಗವನ್ನು ಅರಸಿ ವಿದೇಶಗಳಿಗೆ ತೆರಳುವ ಪ್ರಸಂಗ ಹೆಚ್ಚಾಗುತ್ತಿದೆ. ತಮ್ಮ ಐಚ್ಚಿಕ ವಿಷಯದಲ್ಲಿ ಕೌಶಲ್ಯವನ್ನು ಪಡೆದು ಸ್ವ ಉದ್ಯೋಗವನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್, ಉದ್ಯಮಿಗಳಾದ ಅನ್ನಪೂರ್ಣ, ಆಶಾ ಉಪಸ್ಥಿತರಿದ್ದರು.