

ಲಕ್ಕುಂಡಿ: ಇಂದಿನ ದುಬಾರಿ ಮತ್ತು ಸ್ಪರ್ದಾತ್ಮಕ ಕಾಲದಲ್ಲಿ ಕುಟುಂಬದಲ್ಲಿಯ ಮಹಿಳೆಯರು ಸಹ ದುಡಿಯುವಂತಹ ಸ್ಥಿತಿ ಬಂದಿದ್ದು ಸ್ವ ಉದ್ಯೋಗ ಮಾಡುವ ತರಬೇತಿ ಪಡೆದುಕೊಂಡು ಸ್ವಾವಲಂಬಿಗಳಾಗಬೇಕು ಎಂದು ಗ್ರಾ. ಪಂ ಕಾರ್ಯದರ್ಶಿ ಎಂ. ಎ. ಗಾಜಿ ಸಲಹೆ ನೀಡಿದರು.
ಇಲ್ಲಿಯ ಗಾಲಗೊಂಡ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ರಾಜರಾಜೇಶ್ವರಿ ಜ್ಞಾನ ವಿಕಾಸ ಕೇಂದ್ರವು ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವಂತೆ ಮಹಿಳೆಯರು ಒಗ್ಗಟ್ಟಾದರೆ ಯಾವ ಕ್ಷೇತ್ರದಲ್ಲಿಯಾದರೂ ಮುಂದೆ ಬರಬಹುದು. ಈ ದಿಸೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತರಬೇತಿ ಹಾಗೂ ಸ್ವ ಉದ್ಯೋಗ ಮಾಡಲು ಆರ್ಥಿಕ ಸಹಾಯ ಮಾಡಲು ಹಗಲಿರುಳು ಶ್ರಮ ವಹಿಸುತ್ತಿದೆ. ಆದ್ದರಿಂದ ಮಹಿಳೆಯರು ಸ್ವಾವಲಂಬಿಗಳಾಗಲು ತರಬೇತಿ ಪಡೆದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸAಪನ್ಮೂಲ ವ್ಯಕ್ತಿ ಆರ್ ಸೆಟ್ ಸಂಸ್ಥೆಯ ನಿರ್ದೇಶಕ ಪಂಚಾಕ್ಷರಿ ಹೊಸಮನಿ ಮಾತನಾಡಿ ಒಬ್ಬ ಮಹಿಳೆ ಮನಸ್ಸು ಮಾಡಿದರೆ ಸಮಾಜದ ಸ್ವಾಸ್ಥö್ಯ ಹಾಗೂ ತನ್ನ ಕುಟುಂಬದ ಸರ್ವೋತೋಮುಖ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಧರ್ಮಸ್ಥಳದ ಡಾ ವೀರೇಂದ್ರ ಹೆಗ್ಗಡೆಯವರು ಹೇಳುವಂತೆ ಹತ್ತು ವರ್ಷ ವ್ಯಾಸಂಗ ಮಾಡಿ ಮತ್ತೊಬ್ಬರ ಲೆಕ್ಕ ಬರೆಯುವದಕ್ಕಿಂತ ಸ್ವ ಉದ್ಯೋಗ ಮಾಡಿ ನಮ್ಮ ಲೆಕ್ಕವನ್ನು ನಾವೇ ಬರೆಯಬೇಕು ಅಂದಾಗ ಮಾತ್ರ ಭವಿಷ್ಯ ಉಜ್ವಲವಾಗಿ ಬೆಳೆಯಲು ಸಾಧ್ಯ ಎಂದರು. ಆರ್ ಸೆಟ್ ಸಂಸ್ಥೆಯ ಕಾರ್ಯಕರ್ತ ನವೀನ ಅವರು ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೇಣ ಬತ್ತಿ , ಅಗರ ಬತ್ತಿ ತಯಾರಿಕೆ, ಟೇಲರಿಂಗ್, ಹಪ್ಪಳ , ಉಪ್ಪನಕಾಯಿ ಮಸಾಲಾ ಪೌಡರ್ ತಯಾರಿಕೆ, ಬ್ಯೂಟಿ ಪಾರ್ಲರ್ , ದ್ವಿ ಚಕ್ರ ವಾಹನ ಮೊಬೈಲ್ ರೀಪೆರಿ, ಪೋಟೋಗ್ರಾಫಿ, ವಿಡಿಯೋಗ್ರಾಫಿ ಕಲಿಕೆ, ಏರ್ ಕಂಡಿಷನ್ ಮತ್ತು ರೆಪ್ರೀಜರೆಟರ್, ಟಿ.ವಿ. ದುರಸ್ಥಿ ತರಬೇತಿಯ ಕುರಿತು ಮಾಹಿತಿ ನೀಡಿದರು. ತರಬೇತಿಯ ಕುರಿತು ಮಹಿಳೆಯರು ಸಂವಾದ ನಡೆಸಿದರು. ಸಾವಿತ್ರಿ ಯಲಿಶಿರುಂದ ಅಧ್ಯಕ್ಷತೆ ವಹಿಸಿದ್ದರು . ಶಕುಂತಲಾ ಹುನಾಲದ, ಕೊಟ್ರೇಶ ಕಮತರ ವೇದಿಕೆಯಲ್ಲಿದ್ದರು. ವಲಯ ಮೇಲ್ವಿಚಾರಕ ದಾದಾ ಕಲಂದರ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಂಜುಳಾ ಜೈನ ನಿರೂಪಿಸಿ ವಂದಿಸಿದರು.