ವಾಲ್ಪಾಡಿಯಲ್ಲಿ ಸ್ವ ಉದ್ಯೋಗ ತರಬೇತಿ

tharabethi
ಬಟ್ಟೆ ಕಸೂತಿ ತಯಾರಿ ತರಬೇತಿಯ ಸಮಾರೋಪ ವಾಲ್ಪಾಡಿ ಪಂಚಾಯಿತಿ ಬಳಿಯ ಬ್ರಾಹ್ಮರಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು.
Published on

ಮಂಗಳೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ನೇತೃತ್ವದಲ್ಲಿ, 10 ದಿನಗಳ ಬಟ್ಟೆ ಕಸೂತಿ ತಯಾರಿ ತರಬೇತಿಯ ಸಮಾರೋಪ ವಾಲ್ಪಾಡಿ ಪಂಚಾಯಿತಿ ಬಳಿಯ ಬ್ರಾಹ್ಮರಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು. ಬ್ಯಾಂಕ್ ಆಫ್ ಬರೋಡಾ ಮೂಡುಬಿದಿರೆ ಶಾಖೆಯ ಹಿರಿಯ ಪ್ರಬಂಧಕ ಸಂತೋಷ್ ಕುಮಾರ್ ಸ್ವ ಉದ್ಯೋಗಕ್ಕೆ ಬ್ಯಾಂಕ್‌ನಿಂದ ಸಿಗುವ ಸಾಲ ಸೌಲಭ್ಯಗಳ ಮಾಹಿತಿ ನೀಡಿದರು. ಮುಖ್ಯ ಅತಿಥಿ, ಭಾರತೀಯ ವಿಕಾಸ ಟ್ರಸ್ಟ್ ವ್ಯವಸ್ಥಾಪಕ ಜೀವನ್ ಕೊಲ್ಯ ಮಹಿಳೆಯರು ಕೌಶಲ ಹೆಚ್ಚಿಸುವ ತರಬೇತಿಯಲ್ಲಿ ಭಾಗವಹಿಸಿ ಸ್ವ ಉದ್ಯೋಗ ಮಾಡಲು ಆಸಕ್ತಿ ವಹಿಸುವಂತೆ ಸಲಹೆ ನೀಡಿದರು. ತರಬೇತಿ ಪಡೆದ ಮಹಿಳೆಯರು ಅನಿಸಿಕೆ ತಿಳಿಸಿದರು. ಎನ್‌ಆರ್‌ಎಲ್‌ಎಂ ಯೋಜನೆಯ ತಾಲೂಕು ಸಂಯೋಜಕ ಅಶೋಕ್, ಬಿಒಬಿ ಬ್ಯಾಂಕ್‌ನ ಜೋಯಲ್, ತರಬೇತುದಾರರಾದ ಅಶ್ವಿತಾ, ಸ್ವ ಸಹಾಯ ಸಂಘದ ಒಕ್ಕೂಟ ಅಧ್ಯಕ್ಷೆ ವೇದಾವತಿ ಉಪಸ್ಥಿತರಿದ್ದರು. ವಾಲ್ಪಾಡಿ ಗ್ರಾಮ ವ್ಯಾಪ್ತಿಯ ಸುತ್ತಮುತ್ತಲಿನ 25 ಮಹಿಳೆಯರು ತರಬೇತಿ ಪಡೆದು ಪ್ರಮಾಣಪತ್ರ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net