

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಯ ಪ್ರಯುಕ್ತ ಕಡಬ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಪ ಪ್ರಾಂಶುಪಾಲೆ ಡಾ.ವೇದಾವತಿ ಉದ್ಘಾಟಿಸಿದರು. ಜನಜಾಗೃತಿ ಸದಸ್ಯ ಕೊರಗಪ್ಪ ಗೌಡ ಪಿಜಕ್ಕಳ ಅಧ್ಯಕ್ಷತೆ ವಹಿಸಿದ್ದರು ಕಡಬ ತಾಲೂಕು ಜನಜಾಗೃತಿ ಅಧ್ಯಕ್ಷ ಮಹೇಶ್ ಕೆ.ಸವಣೂರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಯೋಜನೆಯ ಪಿಜಕ್ಕಳ ಒಕ್ಕೂಟದ ಅಧ್ಶಕ್ಷ ಜನಾರ್ದನ ನಾಯ್ಕ, ಜನಜಾಗೃತಿ ಸದಸ್ಯ ಶಿವಪ್ರಸಾದ್ ರೈ ಮೈಲೇರಿ, ಸೇವಾಪ್ರತಿನಿಧಿಗಳಾದ ಪುಷ್ಪಲತಾ, ದುರ್ಗಾವತಿ, ಸಂಧ್ಯಾ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ವಂದಿಸಿದರು. ಶಿಕ್ಷಕಿ ಅಪರ್ಣ ಕಾರ್ಯಕ್ರಮ ನಿರ್ವಹಿಸಿದರು.