ವಿದ್ಯಾರ್ಥಿನಿಯರ ಸ್ವರಕ್ಷಣಾ ಪ್ರಶಿಕ್ಷಣ ಮಿಷನ್​ ಸಾಹಸಿಗೆ ಚಾಲನೆ

udp-28-abvp
Published on

ಉಡುಪಿ: ವಿದ್ಯಾರ್ಥಿನಿಯರ ಸ್ವ ರಕ್ಷಣಾ ಪ್ರಶಿಕ್ಷಣಕ್ಕೆಂದು 2015ಕ್ಕೇ ಪ್ರಾರಂಭವಾದ ಮಿಷನ್​ ಸಾಹಸಿ ಕಾರ್ಯಕ್ರಮ ದೇಶಾದ್ಯಂತ ಅಭಿಯಾನವಾಗಿ ಪರಿವರ್ತನೆಯಾಗಿದೆ ಎಂದು ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್​ ಕೋರಿ ಹೇಳಿದರು.

ಮಂಗಳವಾರ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಉಡುಪಿ ನಗರ ವತಿಯಿಂದ 1 ವಾರ ನಡೆಯುವ ಮಿಷನ್​ ಸಾಹಸಿ ಸ್ವರಕ್ಷಣಾ ಕಲಿಕಾ ತರಗತಿ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಮಹಿಳಾ ಕಾಲೇಜು, ತೆಂಕನಿಡಿಯೂರು, ವಿಬಿಸಿಎಲ್​, ಎಂಜಿಎಂ ಕಾಲೇಜಿನ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶಾಮ್​ ಪ್ರಸಾದ್​ ಕುಡ್ವ ಎಬಿವಿಪಿ ಇಂತಹ ರಚನಾತ್ಮಕ ಕಾರ್ಯಕ್ರಮಗಳಿಂದ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಪ್ರೇರೇಪಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರಾಟೆ ತರಬೇತುದಾರ ಲಕ್ಷ್ಮಿಕಾಂತ್​, ಎಬಿವಿಪಿಯ ವಿಭಾಗ ಸಂಚಾಲಕ ನಿಾನ್​ ಆಳ್ವ, ಜಿಲ್ಲಾ ಸಂಚಾಲಕ ಗಣೇಶ್​ ಪೂಜಾರಿ, ತಾಲೂಕು ಸಂಚಾಲಕರಾದ ಅಜಿತ್​ ಜೋಗಿ, ನಗರ ಕಾರ್ಯದರ್ಶಿ ಶ್ರೀವತ್ಸ ಮತ್ತು ಪ್ರಮುಖರಾದ ನವೀನ್​, ಕಾರ್ತಿಕ್​, ಶಿಶಿರ್​, ಅನಂತ್​, ಅನೂಪ್​, ಮಾಣಿಕ್ಯ ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಸ್ವಾಗತಿಸಿ, ಎಬಿವಿಪಿ ನಗರ ವಿದ್ಯಾರ್ಥಿನಿ ಪ್ರಮುಖ ಸಂಹಿತ ಶಾಸ್ತ್ರಿ ವಂದಿಸಿದರು. ನಂತರ ಫೀನಿಕ್ಸ್​ ಅಕಾಡೆಮಿ ಸಂಸ್ಥಾಪಕ ಶಿಹಾನ್​ ಕೀರ್ತಿ ಜಿ. ಅವರು ತರಗತಿಯನ್ನು ಪ್ರಾರಂಭಿಸಿದರು. ನಗರ ಸಹ-ಕಾರ್ಯದರ್ಶಿ ಭಾವನಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net