ಮಹಿಳಾ ಪೊಲೀಸರಿಂದ ಆತ್ಮರಕ್ಷಣಾ ತರಬೇತಿ ಶಿಬಿರ

25 HPT 3A (2)
Published on

ಹೊಸಪೇಟೆ: ಹೆಣ್ಣಿನ ಸಂರಕ್ಷಣೆಗೆ ಸಂಬAಧಿಸಿದAತೆ ಹಲವು ಕಾನೂನುಗಳು ಇವೆ. ಅದರ ಜೊತೆಗೆ ಹೆಣ್ಣು ಕಾನೂನು ಚೌಕಟ್ಟು ಮೀರಿ ವಾಸ್ತವಿಕವಾಗಿ ಅನುಭವಿಸುವ ತೊಂದರೆಗೆ ಆತ್ಮವಿಶ್ವಾಸದಿಂದ ಎದುರಿಸುವ ಧೈರ್ಯ ಹೊಂದಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ್ ಎ. ನಂದಗಡಿ ಹೇಳಿದರು.

ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಜಿಲ್ಲಾಡಳಿತ, ಕಂದಾಯ, ಪೊಲೀಸ್, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಜಿಲ್ಲಾ ಕೇಂದ್ರ ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ `ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕ್ರಮಗಳು' ಕುರಿತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಸ್ತವಿಕವಾಗಿ ಎದುರಿಸುವ ಸಮಸ್ಯೆಯಿಂದ ಹೆಣ್ಣು ಹೇಗೆ ರಕ್ಷಿತಗೊಳ್ಳಬೇಕು ಎಂಬುದು ಬಹುಮುಖ್ಯವಾಗಿದೆ. ಕಠಿಣ ಸಂದರ್ಭದಲ್ಲಿ ಮಹಿಳೆಯರು ಬಲಪ್ರದರ್ಶಿಸುವುದು ಅತಿಮುಖ್ಯ. ಶಿಬಿರದ ಮೂಲಕ ವಿದ್ಯಾರ್ಥಿನಿಯರು ತಾವು ಕಲಿತ ಅಂಶಗಳನ್ನು ಇತರರಿಗೂ ತಲುಪಿಸಬೇಕು ಎಂಬುದೇ ಕಾರ್ಯಕ್ರಮದ ಆಶಯ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಿಶನ್ ಬಿ. ಮಾಡಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲೂ ಹೆಣ್ಣಿಗೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ಕಡಿಮೆಯಾಗಿಲ್ಲ. ಹೆಣ್ಣಿನ ಗೌರವ ರಕ್ಷಣೆ ಎನ್ನುವುದು ಕೇವಲ ವಾಕ್ಯಗಳಲ್ಲಿಯೇ ಮುಗಿದು ಹೋಗುವ ಬದಲು ಅದು ಜಾರಿಗೆ ಬರುವಂತಾಗಬೇಕು. ಅದಕ್ಕಾಗಿ ಹೆಣ್ಣುಮಕ್ಕಳು ಶಕ್ತಿಯುತವಾಗಬೇಕು. ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಸುವ ಛಾತಿ ಬೆಳೆಸಿಕೊಳ್ಳಬೇಕು ಎಂದು ಧೈರ್ಯ ತುಂಬಿದರು.
ಟಿಬಿ ಡ್ಯಾಂ ಠಾಣೆಯ ಪಿಎಸ್‌ಐ ಶಿಲ್ಪಾ ಮೂಗನಗೌಡ್ರ ಮಾತನಾಡಿ, ಮಹಿಳೆಯರು ದೈಹಿಕ, ಯೋಚನಾ ಬಲದ ಮೂಲಕ ಆತ್ಮರಕ್ಷಣೆಯನ್ನು ಹೊಂದಬೇಕು. ಆತ್ಮರಕ್ಷಣೆಗಾಗಿ ಕರಾಟೆ, ಜೂಡೋ, ಮಾರ್ಷಲ್ ಆರ್ಟ್ಸ್ ಬೇಸಿಕ್ ಕಲಿಕೆಯ ಅರಿವು ಅಗತ್ಯವಾಗಿದೆ. ತುರ್ತು ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸ್ ಇಲಾಖೆ ಆರಂಭಿಸಿರುವ ವಿವಿಧ ಆಪ್‌ಗಳ ನೆರವು ಪಡೆದುಕೊಳ್ಳಬಹುದು. ಮೈ ಸೇಫ್ಟಿ ಪಿನ್, ಬೀ ಸೇಫ್, ಇ-ಅಲರಾಂ ಹಾಗೂ ೧೧೨ ಸಹಾಯವಾಣಿ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.

ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕವು ಕಿರುಕುಳ ನಡೆಯುವ ಸಂಭವ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ತೀರಾ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು, ಸ್ಟೋರಿ, ಸ್ಟೇಟಸ್ ಹಾಕುವುದನ್ನು ನಿಯಂತ್ರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮಹಿಳಾ ಪೊಲೀಸ್ ಹಾಗೂ ಕರಾಟೆ ಪಟುಗಳು ಆತ್ಮರಕ್ಷಣಾ ಪಟ್ಟುಗಳನ್ನು ಪ್ರದರ್ಶಿಸಿದರು.

ವೇದಿಕೆ ಮೇಲೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಲತಾ ಬಿ. ಹುಲ್ಲೂರ, ಅಪರ ಸಿವಿಲ್ ನ್ಯಾಯಾಧೀಶರಾದ ರಮೇಶ ಬಾಬು ಬಿ.ಎನ್., ಪ್ರಧಾನ ಸಿವಿಲ್ ನ್ಯಾಯಾಧೀಶ ಕಿಶನ್ ಬಿ. ಮಾಡಲಗಿ, ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ತೃಪ್ತಿ ಧರಣಿ , ೨ನೇ ಅಪರ ಸಿವಿಲ್ ನ್ಯಾಯಾಧೀಶ ಸಂಜೀವ್ ಕುಮಾರ್ ಜಿ., ಡಿವೈಎಸ್ಪಿ ಮಂಜುನಾಥ್ ಟಿ., ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಗ್ರೇಡ್-೨ ತಹಶೀಲ್ದಾರ್ ಮೇಘ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಸವರಾಜ, ಪ್ರಧಾನ ಕಾರ್ಯದರ್ಶಿ ಎ. ಕರುಣಾನಿಧಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net