17ರಂದು ಜಿಲ್ಲೆಯಲ್ಲಿ ಸ್ವಯಂ ಘೋಷಿತ ಬಂದ್​

14 KLR 05
Published on

ಸರ್ವೊಚ್ಚ ನ್ಯಾಯಾಲಯ ನ್ಯಾಯಾಧೀಶರ ಮೇಲೆ ಶೂ ಎಸೆತ ಯತ್ನ ಖಂಡಿಸಿ ವಿವಿಧ ಸಂಟನೆಗಳ ಕರೆ

ಕೋಲಾರ: ಪ್ರಜಾಪ್ರಭುತ್ವದ 3ನೇ ಅಂಗ ಮತ್ತು ಸಂವಿಧಾನ ಸಂರಕ್ಷಣೆಯ ಹೊಣೆಗಾರಿಕೆ ನಿರ್ವಹಿಸುತ್ತಿರುವ ಸರ್ವೊಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಹಿರಿಯ ವಕೀಲ ರಾಕೇಶ್​ ಕಿಶೋರ್​ ಶೂ ಎಸೆದು ಸಂವಿಧಾನದ ಪೀಠಕ್ಕೆ ಅಪಮಾನಿಸಿರುವುದನ್ನು ಖಂಡಿಸಿ ಅ.17ರಂದು ಸ್ವಯಂ ಪ್ರೇರಿತರಾಗಿ ಜಿಲ್ಲಾ ಬಂದ್​ಗೆ ಜಿಲ್ಲಾ ಜನಪರ ಸಂಟನೆಗಳ ಒಕ್ಕೂಟವು ಕರೆ ನೀಡಲಾಗಿದೆ.

ನಗರದ ಪತ್ರಕರ್ತರ ಭವನದಲ್ಲಿನ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜನಪರ ಸಂಟನೆಗಳ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಪ್ರಜಾ ಪ್ರಭುತ್ವದ ಆತ್ಮವಾದ ಸಂವಿಧಾನಕ್ಕೆ ಹಾಗೂ 140 ಕೋಟಿ ಜನತೆಯ ಸಾರ್ವಭೌಮತ್ವಕ್ಕೆ ಮಾಡಿದ ಅಪಮಾನವಾಗಿದೆ. ಇದು ನ್ಯಾಯಮೂರ್ತಿ ಗವಾಯಿ ಅವರ ಮೇಲಿನ ಹಲ್ಲೆಯಾಗಿರದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ಆರ್​ಎಸ್​ಎಸ್​ಗೆ 100 ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಇಂಥಹ ಕೃತ್ಯ ನಡೆದಿರುವುದು ಈ ದೇಶದಲ್ಲಿ ಮತ್ತು ಮನುಸ್ಮ$ತಿ ಶಾಸನವಾಗಿ ಮತ್ತೆ ಪ್ರತಿಷ್ಠಾಪಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ದೇಶವನ್ನು ಸಾರ್ವಭೌಮ ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಸಮಾನತೆ, ಸೋದರತೆ, ಜಾತ್ಯಾತಿತತೆಯನ್ನು ಬಯಸುವ ದ.ಸಂ.ಸ. ಪ್ರಗತಿ ಹಾಗೂ ಕನ್ನಡಪರ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಭಾಷಾ. ಸಂಟನೆಗಳು ಮತ್ತು ಮಹಿಳಾ ಸಂಟನೆಗಳು ಮತ್ತು ಸಂವಿಧಾನ ಸಂರಕ್ಷಣೆ ಬಯಸುವ ಪ್ರತಿಯೊಬ್ಬರೂ ಈ ಸ್ವಯಂ ಪ್ರೇರಿತ ಬಂದ್​ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ದ.ಸಂ.ಸ ಮುಖಂಡ ಟಿ.ವಿಜಯಕುಮಾರ್​, ಗಮಕ ಶಾಂತಮ್ಮ, ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್​ ಬಾಬು, ಅಲ್ಪಸಂಖ್ಯಾತರ ಮುಖಂಡ ಅನ್ವರ್​ಪಾಷಾ, ಸಂಯುಕ್ತ ದಲಿತ ಸಂಟನೆಗಳ ಒಕ್ಕೂಟದ ಸಂಸ್ಥಾಪಕ ಡಾ. ಎಂ.ಚಂದ್ರಶೇಖರ್​, ಪಿ.ವಿ.ಸಿ. ಎ.ಕೃಷ್ಣಪ್ಪ, ಎಸ್​ಎಫ್​ಐ ರಾಜ್ಯ ಮಾಜಿ ಅಧ್ಯಕ್ಷ ವಿ.ಅಂಬರೀಷ್​, ವರದೇನಹಳ್ಳಿ ವೆಂಕಟೇಶ್​, ಹಾರೋಹಳ್ಳಿ ರವಿ, ಡಿ.ಎಸ್​.ಎಸ್​. (ಅಂಬೇಡ್ಕರ್​ ವಾದ) ಶ್ರೀರಂಗ, ಸಂಗಸಂದ್ರ ವಿಜಯ ಕುಮಾರ್​. ಸುಬ್ರಹ್ಮಣಿ, ಈ ನೆೆಲ ಈ ಜಲ ವೆಂಕಟಾಚಲಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net