

ವಿಜಯಪುರ: ಎಚ್ಐವಿ ಸೊಂಕಿತರನ್ನು ಸಮಾಜದಿಂದ ದೂರವಿಡದೇ ಅವರನ್ನು ಆತ್ಮೀಯವಾಗಿ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಸಲಹೆ ನೀಡಿದರು.
ನಗರದ ಸಂತ ಜೋಸೆಫ್ ಆರೋಗ್ಯ ಮತ್ತು ಸಮುದಾಯ ಕೇಂದ್ರದ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಕ್ರಿಸ್ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಚ್ಐವಿ ಪೀಡಿತರು ಯಾವುದೇ ತೋಂದರೆಗಳಿಗೆ ಒಳಗಾಗದೆ ಸರ್ಕಾರದಿಂದ ಅನುಷ್ಟಾನಗೊಳಿಸಿರುವ ಯೋಜನೆಗಳ ಲಾಭ ಪಡೆದು ನೆಮ್ಮದಿಯ ಜೀವನ ಸಾಗಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಮಾತನಾಡಿ, ಎಚ್ಐವಿ ಪಿಡಿತರಿಗೆ ಎಆರ್ಟಿ ಮಾತ್ರೆಗಳ ಜತೆಗೆ ಆತ್ಮಸ್ಥೆರ್ಯ ಕೂಡ ತುಂಬಾ ಮುಖ್ಯವಾಗಿದೆ. ಎಚ್ಐವಿ ಪಿಡಿತರು ಮಾನಸಿಕ ಖಿನ್ನತೆಗೆ ಒಳಗಾಗದೆ ಆತ್ಮಸ್ಥೆರ್ಯದಿಂದ ಮುನ್ನಡೆಯಬೇಕು ಎಂದು ಹೇಳಿದರು.
ಅತಿಥಿ ಜಿಲ್ಲಾ ಮಕ್ಕಳ ರಕ್ಷಣಾ ಟಕ ಸಾಂಸ್ಥಿಕ ಅಧಿಕಾರಿ ವಾಣಿಶ್ರೀ ನಿಂಬಾಳ ಮತ್ತು ಅಧ್ಯಕ್ಷತೆ ವಹಿಸಿದ ಫಾದರ್. ಪ್ರಾನ್ಸಿಸ್ ಮ್ಯಾನೆಜಸ್ಸ್ ಮಾತನಾಡಿದರು. ಫಾದರ್ ಟಿಯೋಲ್ ಮಚಾದೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಸ್ಟರ್ ಅಮಲಾ ರಾಣಿ ಸಂಸ್ಥೆಯ ವರದಿವಾಚನ ಮಾಡಿದರು.
ಸುನೀತಾ ಮೋರೆ ಸ್ವಾಗತಿಸಿದರು. ಶೃತಿ ನಿಡೋಣಿ ನಿರೂಪಿಸಿದರು. 200 ಕ್ಕೂ ಅಧಿಕ ಎಚ್ಐವಿ ಪಿಡಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.