

ಗಂಗಾವತಿ: ಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ.ಪೂ.ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪುರುಷರ ಗುಂಪು ಮತ್ತು ವೈಯಕ್ತಿಕ ವಿಭಾಗದಲ್ಲಿ ಖಲಂದರ್, ನಾಗರಾಜ, ಕೆ.ವೀರೇಶ, ಹರೀಶ, ಶರಣಬಸವ,ಗಗನ್, ಮಹೇಶ, ಬಸವರಾಜ ಮೇಟಿ, ಎ.ಮಂಜುನಾಥ, ಕಿರಣಕುಮಾರ, ಉಮೇಶ, ಮಹಿಳಾ ವಿಭಾಗದಲ್ಲಿ ಜಯಶ್ರೀ, ಮಹಾಲಕ್ಷ್ಮೀ, ಐಶ್ವರ್ಯಾ, ನಂದಿತಾ ಉತ್ತಮ ಪ್ರದರ್ಶನದೊಂದಿಗೆ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಥ್ರೋ, ಬಾಸ್ಕೇಟ್, ಹ್ಯಾಂಡ್, ುಟ್‌ಬಾಲ್, ಕರಾಟೆ, ಟೇಕ್ವಾಂಡ್ ಮತ್ತು ಆಥ್ಲೀಟ್ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ತಿಳಿಸಿದ್ದಾರೆ.