ವಿಭಾಗ ಮಟ್ಟಕ್ಕೆ ಆಯ್ಕೆ

valaya matta
Published on

ಮಡಿಕೇರಿ: ಭಾಗಮಂಡಲದಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕುಶಾಲನಗರದಲ್ಲಿ ನಡೆದ ಜಿಲ್ಲಾ ಮಟ್ಟದ ೧೭ ವಯೋಮಿತಿಯ ಒಳಗಿನ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಮಂಗಳೂರುನಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದರೆ, ಕೂಡಿಗೆಯಲ್ಲಿ ನಡೆದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಪ್ರಾಥಮಿಕ ಬಾಲಕಿಯರು ದ್ವಿತೀಯ ಸ್ಥಾನ ಮತ್ತು ಪ್ರಾಥಮಿಕ ಬಾಲಕರು ಪ್ರಥಮ ಸ್ಥಾನ ಪಡೆದು ಚಾಮರಾಜನಗರದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಕ್ಕಳ ಈ ಕ್ರೀಡಾಸಾಧನೆಗೆ ಪ್ರಾಂಶುಪಾಲರಾದ ಲೋಕೇಶ್, ನಿಲಯಪಾಲಕರಾದ ಕೆ.ಕೆ.ದೀಪಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಪಿ.ಪವನ್‌ಸಾಗರ್ ತಂಡದ ವ್ಯವಸ್ಥಾಪಕ ಕೆ.ಜಿ.ಚೇತನ್ ಮತ್ತು ಎಲ್ಲಾ ಭೋದಕ ಭೋದಕೇತರ ಸಿಬ್ಬಂದಿಗಳು ಪೋಷಕರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net