ಕ್ರೀಡಾ ಶಾಲಾ ಪ್ರವೇಶಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

sports job web
Published on

ಮೈಸೂರು:2024/25ನೇ ಸಾಲಿನ ಮೈಸೂರು ಜಿಲ್ಲಾ ಕ್ರೀಡಾಶಾಲೆಯ ಪ್ರವೇಶ ಪಡೆಯುವ ಸಂಬoಧ ಅಯ್ಕೆ ಪ್ರಕ್ರಿಯೆ ಫೆ.27 ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ.

ಫೆ.27 ರಂದು ಬಾಲಕ ಅಥವಾ ಬಾಲಕಿಯರನ್ನು ಅಥ್ಲೆಟಿಕ್ ಮತ್ತು ಜಿಮ್ಯಾಸ್ಟಿಕ್ ಕ್ರೀಡೆಗಳಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. (ದಿನಾಂಕ 01-06-2024ಕ್ಕೆ 10 ವರ್ಷದೊಳಗಿರಬೇಕು ಹಾಗೂ 4ನೇ ತರಗತಿ ಓದುತ್ತಿರಬೇಕು) 2024-25ನೇ ಶೈಕ್ಷಣಿಕ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು. ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆಯಾದ ಕ್ರೀಡಾಪಟುಗಳು ಹಾಗೂ ಕ್ರೀಡಾ ಶಾಲೆಗೆ ಸೇರಲು ಇಚ್ಛಿಸುವ ಕ್ರೀಡಾಪಟುಗಳು ನೇರವಾಗಿ ಫೆ.27 ರಂದು ಬೆಳಿಗ್ಗೆ 9 ಗಂಟೆಗೆ ನಜರಾಬಾದ್‌ನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ದೂ.ಸಂ: 0821-2564179 ಹಾಗೂ ಜಿಮ್ನಾಸ್ಟಿಕ್ಸ್ ತರಬೇತುದಾರರಾದ ಲೋಕೇಶ್.ಬಿ ದೂ.ಸಂ: 9449175644 ಮತ್ತು ರಾಮಸ್ವಾಮಿ ಕೆ.ಎಸ್ ದೂ.ಸಂ: 9449300330 ರ ಮೂಲಕ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net