

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಗಸ್ಟ್ 21 ರಂದು ಬೆಳಿಗ್ಗೆ 11 ಗಂಟೆಗೆ ಸಣ್ಣ ಖೇಲೋ ಇಂಡಿಯಾ ಹಾಕಿ ತರಬೇತಿ ಕೇಂದ್ರಕ್ಕೆ 14 ವರ್ಷ ವಯೋಮಿತಿ ಒಳಪಟ್ಟ ಕಿರಿಯ ಬಾಲಕ/ಬಾಲಕಿಯರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಆಸಕ್ತಿಯುಳ್ಳ ಹಾಕಿ ಕ್ರೀಡಾಪಟುಗಳು ಆಯ್ಕೆಗೆ ಬರುವಾಗ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರುವುದು.
ಹೆಚ್ಚಿನ ಮಾಹಿತಿಗಾಗಿ ನಜರ್‌ಬಾದ್‌ನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿನ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಕಿ ತರಬೇತುದಾರರಾದ ಸುಂದರೇಶ್. ಆರ್ ಮತ್ತು ಖೇಲೋ ಇಂಡಿಯಾ ಹಾಕಿ ತರಬೇತುದಾರರಾದ ಕೃತಿಕ ಎಸ್.ಪಿ ಅಥವಾ ಕಛೇರಿಯ ದೂ.ಸಂ:0821-2564179 ಅನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.