ಡಿಎಸ್‌ಎಸ್‌ಗೆ ಪದಾಧಿಕಾರಿಗಳ ಆಯ್ಕೆ

Published on

ಗಂಗಾವತಿ: ನಗರದ ಸರ್ಕಿಟ್ ಹೌಸ್‌ನಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದಿಂದ ಆಯೋಜಿಸಿದ್ದ ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಡಿ.ನಾಗರಾಜ್ ಸಂಗಾಪುರ (ಸಂಯೋಜಕ), ಹನುಮಂತಪ್ಪ ಹೊಸಪೇಟೆ, ಪಿ.ಜಮಲಪ್ಪ ಸಣಾಪುರ, ರವಿ ನಾಯ್ಕ ಸಂಗಾಪುರ, ಹನುಮಂತಪ್ಪ ಹೊಸಪೇಟೆ, ಪಿ. ಜಮಲಪ್ಪ ಸಣಾಪುರ, ರವಿ ನಾಯ್ಕ ಸಂಗಾಪುರ (ಸಂಘಟನಾ ಸಂಯೋಜಕರು), ವೀರೇಶ ಮಲ್ಲಾಪುರ (ಸಂ.ಖಜಾಂಚಿ), ಅಂಜಿನಪ್ಪ ಸಂಗಾಪುರ, ನಾಗಪ್ಪ ಸಂಗಾಪುರ, ಗೋಕರಪ್ಪ ಸಂಗಾಪುರ, ವೆಂಕಟೇಶ ಸಂಗಾಪುರ (ಸದಸ್ಯರು), ವಿದ್ಯಾರ್ಥಿ ಘಟಕಕ್ಕೆ ತಾಲೂಕು ಸಂಘಟನಾ ಸಂಯೋಜಕರನ್ನಾಗಿ ಪ್ರೇಮ್‌ಕುಮಾರ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯ ಸಂ.ಸಂಯೋಜಕ ದೇವಪ್ಪ ದೇವರಮನಿ ತಿಳಿಸಿದರು.

ಸಭೆಯಲ್ಲಿ ಹೋರಾಟ, ಸಂಘಟನೆ ಮತ್ತು ಕ್ರೀಯಾಶೀಲ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾ ಸಂಯೋಜಕ ಕಂಠೆಪ್ಪ ಹಣವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net