

ಮೈಸೂರು: ಮಹಾರಾಜ ಟ್ರೋಫಿ-2025 ಕ್ರಿಕೆಟ್ ಪಂದ್ಯಾವಳಿಗಾಗಿ ನಗರದಲ್ಲಿ ಮೈಸೂರು ವಾರಿಯರ್ಸ್ ತಂಡದಿಂದ ಬುಧವಾರ ಪ್ರತಿಭಾನ್ವೇಷಣೆ ಕಾರ್ಯ ನಡೆಯಿತು.
184 ಯುವ ಕ್ರಿಕೆಟಿಗರು ಮೈಸೂರು ವಾರಿಯರ್ಸ್ ತಂಡ ಸೇರುವ ಉದ್ದೇಶದಿಂದ ಪ್ರತಿಭಾನ್ವೇಷಣೆ ಕಾರ್ಯದಲ್ಲಿ ಭಾಗವಹಿಸಿದರು. ಈ ಪೈಕಿ 53 ವೇಗದ ಬೌಲರ್‌ಗಳು, 40 ಸ್ಪಿನ್ನರ್‌ಗಳು, 31 ಬ್ಯಾಟ್ಸ್‌ಮನ್‌ಗಳು, 50 ಆಲ್ರೌಂಡರ್‌ಗಳು ಮತ್ತು 10 ವಿಕೆಟ್ ಕೀಪರ್‌ಗಳು ಇದ್ದರು.
ಒಟ್ಟು 10 ಪ್ರತಿಭಾನ್ವಿತರನ್ನು ಈ ಸಂದರ್ಭ ಆಯ್ಕೆ ಮಾಡಲಾಯಿತು. ಮನೋಜ್ ರಮೇಶ್, ಸಿ.ದಕ್ಷತ್, ವಿಕಾಸ್ ಗೌಡ, ಆರ್. ಹಿಮೇಶ್, ಸ್ವಯಂ ರಾಜೇ ಅರಸ್, ಗೌತಮ್ ಸಾಗರ್, ಎಂ.ಆರ್. ಜಯಂತ್, ಸಿ.ರಿತೇಶ್, ಎ.ನಿಖಿಲ್, ಕೆ.ಗೌರವ್ ಆಯ್ಕೆಗೊಂಡವರು. ಈ ಆಟಗಾರರು ಮೈಸೂರು ವಾರಿಯರ್ಸ್ ತಂಡದ ಜತೆಗೆ ಕಠಿಣ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತಿಮವಾಗಿ ಈ 10 ಮಂದಿಯಲ್ಲಿ ಇಬ್ಬರನ್ನು ಮಹಾರಾಜ ಟ್ರೋಫಿ 2025 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡಲು ಆಯ್ಕೆ ಮಾಡಲಾಗುವುದು.
ಮೈಸೂರು ವಾರಿಯರ್ಸ್‌ನ ಮಾಲೀಕ ಅರ್ಜುನ್ ರಂಗ, ತಂಡದ ತರಬೇತುದಾರ ಆರ್‌ಎಕ್ಸ್ ಮುರಳೀಧರ್, ಸಹಾಯಕ ತರಬೇತುದಾರ ವಿಜಯ್ ಮದ್ಯಲ್ಕರ್, ವ್ಯವಸ್ಥಾಪಕ ಎಂ.ಆರ್. ಸುರೇಶ್ ಹಾಗೂ ಇತರರು ಇದ್ದರು.