

ಬಂಟ್ವಾಳ: ತಾಲೂಕಿನ ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘ, ಆಡಳಿತ ಸಮಿತಿಗೆ ನೂತನ ಅಧ್ಯಕ್ಷರಾಗಿ ವಾಮನ ಪೂಜಾರಿ ಸೂರ್ಲ, ಉಪಾಧ್ಯಕ್ಷರಾಗಿ ರಾಧಕೃಷ್ಣ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಮಂಗಳೂರು ಸಹಕಾರ ಸಂಘ ಸಹಾಯಕ ನಿಬಂಧಕರ ಕಚೇರಿಯ ಎನ್.ಜೆ.ಗೋಪಾಲ್ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಂಘದ ಕಾರ್ಯದರ್ಶಿ, ಸಿಬ್ಬಂದಿ ಸಹಕರಿಸಿದರು. ನಿರ್ದೇಶಕರಾದ ಯಾದವ ಮೂಲ್ಯ, ವಾಮನ ಪೂಜಾರಿ ತೋಡಬಳಿ, ಚಾಲ್ಸ್ ಡಿಸೋಜಾ, ಸುಂದರ ಮೂಲ್ಯ, ಅಣ್ಣು ಮೂಲ್ಯ, ಮೋಹಿನಿ, ಕಲೀನಾ ಲೋಬೋ, ವೃಂದಾಕ್ಷಿ, ಸರೋಜಿನಿ ಉಪಸ್ಥಿತರಿದ್ದರು. ಸಂಘದ ಐದು ವರ್ಷಗಳ ಆಡಳಿತ ಸಮಿತಿಗೆ ನಡೆದ ಚುನಾವಣೆಯಲ್ಲಿ 13 ಸ್ಥಾನದ ಪೈಕಿ 11 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು, ಎರಡು ಸ್ಥಾನ ಖಾಲಿ ಉಳಿದಿದೆ.