

ಕೆ.ಆರ್.ಪೇಟೆ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ನೌಕರರ ಸಂಘ ಕೆ.ಆರ್.ಪೇಟೆ ತಾಲೂಕು ಸಮಿತಿಗೆ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಿರಿಯ ಇಂಜಿನಿಯರ್ ಎಚ್.ಸಿ.ಶಿವಶಂಕರಮೂರ್ತಿ ಮತ್ತು ಕೇಂದ್ರ ಸಮಿತಿ ಸದಸ್ಯ ಕೆ.ಮಧುಸೂದನ್ ತಂಡ ಬರೋಬ್ಬರಿ 18 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಾಲೂಕು ಸಮಿತಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೆ.ರಘು ತಂಡ 3 ಸ್ಥಾನಗಳನ್ನು ಪಡೆದುಕೊಂಡಿದೆ.
ಗೆಲುವು ಸಾಧಿಸಿದವರ ವಿವರ: ಪಿ.ಅನಿಲ್(136ಮತ), ಕೆ.ರಘು(133ಮತ), ಎಚ್.ಸಿ.ಶಿವಶಂಕರಮೂರ್ತಿ(131 ಮತ), ಹರ್ಷಿತ್.ಆರ್(124), ರವಿಕುಮಾರ್(121), ಡಿ.ಎಂ.ಹರೀಶ್(119), ಬಿ.ಆರ್.ಪುಟ್ಟಪ್ಪ(118), ಧ್ರುವಕುಮಾರ್(118), ಸಿ.ಎನ್.ದಿಲೀಪ್(115), ಎ.ಬಿ.ಗಿರೀಶ್(114), ಎಂ.ಡಿ.ಕಿರಣ್(112), ಪಿ.ಎಲ್.ಅನಂತಕುಮಾರ್(112), ಎಚ್.ಎಲ್.ಅರುಣ್(109), ಕೆ.ಎನ್.ಅರುಣಕುಮಾರ್(109), ಟಿ.ಸ್ವಾಮೀಗೌಡ(107), ಟಿ.ಡಿ.ಪರಮೇಶ್(105), ಡಿ.ಕೆ.ಶ್ರೇಯಸ್(104), ಎಚ್.ಎಸ್.ರಾಜೇಗೌಡ (103), ಟಿ.ಆರ್.ಸಂತೋಷ್(103), ಕೆ.ಎನ್.ಜಯಪಾಲ್(102), ಕೆ.ಕೆ.ಮಹೇಶ್-101 ಮತಗಳನ್ನು ಪಡೆದುಕೊಳ್ಳುವ ಮೂಲಕ ಅವರು ಜಯ ಸಾಧಿಸಿದ್ದಾರೆ.
ಈ ಪೈಕಿ ರಘು ತಂಡದಿಂದ ಕೆ.ರಘು(113), ಜಯಪಾಲ್(102), ರಾಜೇಗೌಡ(103) ಜಯ ಸಾಧಿಸಿದ್ದಾರೆ. ಉಳಿದ 18 ಸದಸ್ಯರು ಕಿರಿಯ ಇಂಜಿನಿಯರ್ ಎಚ್.ಸಿ.ಶಿವಶಂಕರಮೂರ್ತಿ ಮತ್ತು ಕೆ.ಮಧುಸೂದನ್ ನೇತೃತ್ವದಲ್ಲಿ ಅತ್ಯಧಿಕ ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ವಕೀಲ ಸಿ.ನಿರಂಜನ್ ಕಾರ್ಯನಿರ್ವಹಿಸಿದರು. ಸಹ ಚುನಾವಣಾಧಿಕಾರಿಗಳಾಗಿ ಯುವ ವಕೀಲರಾದ ಸುದೀಪ್, ಶಶಿಕುಮಾರ್ ಕಾರ್ಯನಿರ್ವಹಣೆ ಮಾಡಿದರು.