

ಬೇಲೂರು: ತಾಲೂಕಿನ ಬೀಕ್ಕೊಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ 8 ಮತಗಳನ್ನು ಪಡೆದ ಭಾನುಪ್ರಕಾಶ್ ಅಧ್ಯಕ್ಷರಾಗಿ ಆಯ್ಕೆಯಾದರು.
ಬೀಕ್ಕೊಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ಜೆ.ಸಿ.ಮೋಹನ್ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಭಾನುಪ್ರಕಾಶ್, ಪರಮೇಶ್ ಹಾಗೂ ಪ್ರಸನ್ನ ನಾಮಪತ್ರ ಸಲ್ಲಿಸಿದ್ದರು. ಆದರೆ ಪ್ರಸನ್ನ ನಾಮಪತ್ರ ವಾಪಸ್ ಪಡೆದಿದ್ದರಿಂದ ಭಾನುಪ್ರಕಾಶ್ ಹಾಗೂ ಪರಮೇಶ್ ಕಣದಲ್ಲಿ ಉಳಿದಿದ್ದರಿಂದ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಾನುಪ್ರಕಾಶ್ 8 ಮತಗಳು, ಪರಮೇಶ್ 4 ಮತಗಳನ್ನು ಪಡೆದರು. ಈ ಸಂದರ್ಭ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕಿ ಲೀಲಾ, 4 ಮತಗಳನ್ನು ಹೆಚ್ಚು ಪಡೆದ ಭಾನುಪ್ರಕಾಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಬೀಕ್ಕೊಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಸಹಕಾರ ಸಂಘ ಎಂದರೆ ರೈತರ ಸಂಘ, ಅವರ ಸಹರಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ. ಷೇರುದಾರರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಉಮಾ, ಧನಂಜಯ್, ಹೇಮಚಂದ್ರ, ನಿಂಗೇಗೌಡ, ಚೇತನ್, ಸಿ.ಗೌಡ, ಕುಮಾರ್, ಕಾಳರಾಜ್, ರಾಧಾ, ಪುಷ್ಪರಾಜ್, ಸೇರಿದಂತೆ ಇತರರಿದ್ದರು.