ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ವಿಮಲ್ ಕುಮಾರ್, ರಾಜ್ಯ ಪರಿಷತ್ ಸದಸ್ಯರಾಗಿ ಯಶ್‌ರಾಜ್

Published on

ಕಡಬ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ವಿಮಲ್ ಕುಮಾರ್ ನೆಲ್ಯಾಡಿ, ರಾಜ್ಯ ಪರಿಷತ್ ಸದಸ್ಯರಾಗಿ ಯಶರಾಜ್, ಕೋಶಾಧಿಕಾರಿಯಾಗಿ ಶೇಷಾದ್ರಿ ಆಯ್ಕೆಗೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಈಗಾಗಲೇ ರಚನೆಗೊಂಡಿದ್ದು, ಬಳಿಕ ಸಂಘದ ಪದಾಧಿಕಾರಿಗಳ ಆಯ್ಕೆಗೆ ಶನಿವಾರ ಚುನಾವಣೆ ನಡೆಯಿತು.

ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್ ಚುನಾವಣಾಧಿಕಾರಿಯಾಗಿದ್ದರು. ಪಶುಪಾಲನೆ ಇಲಾಖೆಯ ದಿವಾಕರ, ಕಂದಾಯ ಇಲಾಖೆಯ 2 ಸ್ಥಾನಗಳಿಗೆ ಶೇಷಾದ್ರಿ ಹಾಗೂ ಶ್ರುತಿ, ಪ್ರಾಥಮಿಕ ಶಾಲೆಯ 4 ಸ್ಥಾನಗಳಿಗೆ ರಾಮಕೃಷ್ಣ ಮಲ್ಲಾರ, ದಿಲೀಪ್ ಕುಮಾರ್, ವಿಮಲ್ ಕುಮಾರ್, ಲಿಂಗರಾಜು, ಪ್ರೌಢಶಾಲಾ ವಿಭಾಗದ 1 ಸ್ಥಾನಕ್ಕೆ ಶ್ರೀಲತಾ, ಶಿಕ್ಷಣ ಇಲಾಖೆಯ ಆಡಳಿತ ಕಚೇರಿ ವಿಭಾಗದ 1 ಸ್ಥಾನಕ್ಕೆ ಅತುಲ್ ಭಟ್, ಪ.ಪೂ.ಕಾಲೇಜು ವಿಭಾಗದ 1 ಸ್ಥಾನಕ್ಕೆ ವಾಸುದೇವ ಕೋಲ್ಪೆ, ಸಮಾಜ ಕಲ್ಯಾಣ ಇಲಾಖೆಯ 1 ಸ್ಥಾನಕ್ಕೆ ಲತೇಶ್ ಕುಮಾರ್, ಅರಣ್ಯ ಇಲಾಖೆಯ 1ಸ್ಥಾನಕ್ಕೆ ಯೋಗೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 4 ಸ್ಥಾನಕ್ಕೆ ಮಾಲತಿ ಎಂ.ಡಿ. ಯಶ್‌ರಾಜ್, ಹರ್ಷ ಕುಮಾರ್, ಜಿನ್ಸಿ ಪಿ.ಎ., ಖಜಾನೆ ಇಲಾಖೆಯ 1 ಸ್ಥಾನಕ್ಕೆ ಶಿವರಾಜ್ ಎಂ., ಗ್ರಾಮೀಣಾಭಿವೃದ್ಧಿ ಇಲಾಖೆಯ 2 ಸ್ಥಾನಗಳಿಗೆ ಸಂದೇಶ್ ಹಾಗೂ ಯಶವಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ 1 ಸ್ಥಾನಕ್ಕೆ ಪುಷ್ಪಾವತಿ ಡಿ.ಎಂ., ಪಟ್ಟಣ ಪಂಚಾಯಿತಿನ 1 ಸ್ಥಾನಕ್ಕೆ ಹರೀಶ್ ಬೆದ್ರಾಜೆ, ಭೂಮಾಪನ ಇಲಾಖೆಯ 1 ಸ್ಥಾನಕ್ಕೆ ಗಿರಿ ಗೌಡ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net