ಜಿಲ್ಲಾ ಯುವ ಒಕ್ಕೂಟ ಪದಾಧಿಕಾರಿಗಳ ಆಯ್ಕೆ

Members
Published on

ಅಂಕೋಲಾ: ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾಗಿ ದಿನಕರ ಶಿವರಾಮ ಹೆಬ್ಬಾರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕಾರವಾರದ ದಿಲೀಪ ಪಾಂಡುರಂಗ ಕೋಠಾರಕರ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮುಂಡಗೋಡದ ಮಾಲತೇಶ ಲಿಂಗಪ್ಪ ಜಾಡರ, ಸಿದ್ದಾಪುರದ ಅಣ್ಣಪ್ಪ ನಾರಾಯಣ ನಾಯ್ಕ, ಖಜಾಂಚಿಯಾಗಿ ಶಂಕರಮೂರ್ತಿ ನಾರಾಯಣ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ನಾಯಕ ಅಡ್ಲೂರು, ಗೌರವ ಪತ್ರಿಕಾ ಸಲಹೆಗಾರರಾಗಿ ರಾಘು ಕಾಕರಮಠ, ಜಿಲ್ಲಾ ಪತ್ರಿಕಾ ಕಾರ್ಯದರ್ಶಿಯಾಗಿ ವಿನಾಯಕ ಪಾಂಡು ಮೇಸ್ತ ಹೊನ್ನಾವರ, ಕ್ರೀಡಾ ಕಾರ್ಯದರ್ಶಿಯಾಗಿ ರಾಘವೇಂದ್ರ ರತ್ನಾಕರ ಮೇಸ್ತ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಲೋಕ ನರಸಿಂಹ ಕಡವಾಡಕರ, ಮಂಜುನಾಥ ವಿವೇಕಾನಂದ ನಾಯ್ಕ, ರಾಘವೇಂದ್ರ ಲಿಂಗಪ್ಪ ಕೂಸುರು ಮುಂಡಗೋಡ, ರಾಜೇಶ ನಾಗಪ್ಪ ನಾಯ್ಕ ಭಟ್ಕಳ, ವಿನಾಯಕ ಭಾಸ್ಕರ ನಾಯ್ಕ ಹೊನ್ನಾವರ ಆಯ್ಕೆಯಾಗಿದ್ದಾರೆ.

ಹೊನ್ನಾವರದಲ್ಲಿ ಆಯೋಜಿಸಿದ್ದ ಒಕ್ಕೂಟದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net