ಮದ್ಯವರ್ಜನ ಶಿಬಿರ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

1721788741005
ಕಂಪಲಾಪುರದ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮದ್ಯವರ್ಜನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಸಮಿತಿ ಅಧ್ಯಕ್ಷೆ ಮಂಜುಳಾ ರಾಜ್, ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್, ತಾಲೂಕು ಯೋಜನಾಧಿಕಾರಿ ರವಿ, ಷಣ್ಮುಖ ರಾವ್, ಕೃಷ್ಣೇಗೌಡ ಮುಂತಾದವರು ಹಾಜರಿದ್ದರು.
Published on

ಕಂಪಲಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ನಡೆಯುತ್ತಿರುವ ಮದ್ಯವರ್ಜನ ಶಿಬಿರದ ಸಮಿತಿಯನ್ನು ಮಂಗಳವಾರ ರಚಿಸಲಾಯಿತು.

ಗ್ರಾಮದ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಕೆ.ಬಿ.ಮಂಜುಳಾ ರಾಜ್, ಗೌರವ ಅಧ್ಯಕ್ಷರಾಗಿ ಕೆ.ಎನ್.ಗಿರೀಶ್, ಉಪಾಧ್ಯಕ್ಷರಾಗಿ ಕೆ.ಆರ್.ಸಂತೋಷ್, ಕೃಷ್ಣೇಗೌಡ, ನೇತ್ರಾವತಿ, ಗೋಪಾಲ್, ಗೀತಾ, ಕೋಶಾಧಿಕಾರಿಯಾಗಿ ಜ್ಯೋತಿ, ಗೌರವ ಸಲಹೆಗಾರರಾಗಿ ಡಿ.ಪದ್ಮರಾಜ್, ಸ್ವಾಮಿಗೌಡ, ಸಣ್ಣತಮ್ಮೇಗೌಡ, ಗುರುಸಿದ್ದಪ್ಪ , ಪ್ರಕಾಶ್‌ಗೌಡ , ಪಿ.ಎಂ.ರಾಜು, ನಾಗರಾಜ್ ಕೆ.ಎಂ.ರಾಜಣ್ಣ, ಶಿವಕುಮಾರ್, ಜಯಣ್ಣ, ಶ್ರೀಕಂಠ ಆಯ್ಕೆಯಾದರು.

ಉಡುಪಿ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಗಣೇಶ್, ತಾಲೂಕು ಯೋಜನಾಧಿಕಾರಿ ರವಿ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಷಣ್ಮುಖರಾವ್, ಯ.ಸ್ವಾಮಿಗೌಡ, ಒಕ್ಕೂಟದ ಅಧ್ಯಕ್ಷೆ ರಾಣಿ, ವಲಯ ಮೇಲ್ವಿಚಾರಕಿ ರವಿಕಲಾ ಶೆಟ್ಟಿ ಸೇರಿದಂತೆ ಗ್ರಾಮಸ್ಥರು, ಸೇವಾಪ್ರತಿನಿಧಿಗಳು, ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net