ರೋಣ: ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳವಾರ ಜರುಗಿತು. ನೂತನ ಅಧ್ಯಕ್ಷರಾಗಿ ಶಿವಪ್ಪ ಅರಹುಣಸಿ ಅವಿರೋಧವಾಗಿ ಆಯ್ಕೆಯಾಗಿದ್ದರೆ. ಉಪಾಧ್ಯಕ್ಷರಾಗಿ ಹನುಮಂತಪ್ಪ ಪಟ್ಟೇದ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯಕುಮಾರ ದೊಡ್ಡಮನಿ, ಖಜಾಂಚಿಯಾಗಿ ಬಸವರಾಜ ಉಮಚಗಿ, ಜಿಲ್ಲಾ ಪ್ರತಿನಿಧಿಯಾಗಿ ಸಂಗನಬಸಪ್ಪ ಪರಡ್ಡಿ ಆಯ್ಕೆಗೊಂಡರು.
ನೂತನ ಪದಾಧಿಕಾರಿಗಳಿಗೆ ಉಪಕೃಷಿ ನಿರ್ದೇಶಕ ಬಿ.ಆರ್. ಪಾಲಾಕ್ಷಗೌಡ್ರ, ಸಹಾಯಕ ಕೃಷಿ ನಿರ್ದೇಶಕ ರವೀಂದ್ರಗೌಡ ಪಾಟೀಲ ಪ್ರಮಾಣ ಪತ್ರ ವಿತರಿಸಿದರು.