

ನಾಪೋಕ್ಲು: ಮಡಿಕೇರಿ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಇತ್ತೀಚಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 15 ಸ್ಥಾನಗಳಿಗೂ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ನಾಪಂಡ ರಾಲಿ ಮಾದಯ್ಯ, ಉಪಾಧ್ಯಕ್ಷ-ಅಜಯ್ ಹೊದ್ದೂರು, ಪ್ರಧಾನ ಕಾರ್ಯದರ್ಶಿ-ಮುದ್ದಂಡ ಡಿ.ಬೋಪಣ್ಣ, ಖಜಾಂಚಿ-ಎಂ.ಎಸ್.ಶಂಭಯ್ಯ ಹಾಗೂ ಜಿಲ್ಲಾ ಸಮಿತಿ ಪ್ರತಿನಿಧಿಯಾಗಿ ಕೋಡಿ ಕೆ.ಪೊನ್ನಪ್ಪ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಕಿಶೋರ್‌ಕುಮಾರ್, ಉಮೇಶ್ ಪಳಂಗಪ್ಪ, ಅಯ್ಯಲಪಂಡ ಕಾರ್ಯಪ್ಪ, ಸಿ.ಎಸ್.ಉದಯಕುಮಾರ್, ಸನ್ನಿ ತಿಮ್ಮಯ್ಯ, ಮುಕ್ಕಾಟಿರ ಹರೀಶ್, ಕೋಡಿ ಪೊನ್ನಪ್ಪ, ನಾಗೇಶ್ ಕುಂದಲ್ಪಾಡಿ, ಕೆಆ.ರ್.ರಾಜಾರಾಮ, ಮುಂಡಂಡ ಕಾರ್ಯಪ್ಪ, ನಾಪಂಡ ರವಿ ಕಾಳಪ್ಪ ಆಯ್ಕೆಯಾಗಿದ್ದಾರೆ.