ಸೊಳ್ಳೇಪುರ ಸೊಸೈಟಿಗೆ ಸದಸ್ಯರ ಆಯ್ಕೆ

12kkr2(5-25 sollepura society ele
ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೋಮವಾರ ಕೋಡಿಮಾರನಹಳ್ಳಿ ಸುರೇಶ್ ಹಾಗೂ ಕಳ್ಳನಕೆರೆ ನರಸಿಂಹಯ್ಯ ಅವಿರೋಧ ಆಯ್ಕೆಯಾದರು.
Published on

ಕಿಕ್ಕೇರಿ: ಹೋಬಳಿಯ ಸೊಳ್ಳೇಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಕೋಡಿಮಾರನಹಳ್ಳಿ ಸುರೇಶ್ ಹಾಗೂ ಕಳ್ಳನಕೆರೆ ನರಸಿಂಹಯ್ಯ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.

ಸಂಘದ ಸಾಲಗಾರರಲ್ಲದ ಕ್ಷೇತ್ರದ 1 ಹಾಗೂ ಸಾಲಗಾರ ಕ್ಷೇತ್ರದಿಂದ 10 ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ಮೇ 18ರಂದು ನಡೆಯಲಿದ್ದು, ಸೋಮವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು. ಸಾಲಗಾರರ ಕ್ಷೇತ್ರದ ಮೀಸಲು ಪ್ರವರ್ಗ(ಅ) ದಿಂದ ಕೋಡಿಮಾರನಹಳ್ಳಿ ಸುರೇಶ್ ಹಾಗೂ ಪರಿಶಿಷ್ಟ ವರ್ಗದಿಂದ ಕಳ್ಳನಕೆರೆ ನರಸಿಂಹಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಭರತ್‌ಕುಮಾರ್ ಹಾಜರಿದ್ದರು.

ಉಳಿದ ಸಾಲಗಾರ ಕ್ಷೇತ್ರದ ನಿರ್ದೇಶಕ ಸ್ಥಾನಗಳ ಆಯ್ಕೆಗಾಗಿ ಚುನಾವಣಾ ಕಣದಲ್ಲಿ ಸಾಮಾನ್ಯ ಕ್ಷೇತ್ರದಿಂದ 9, ಪ್ರವರ್ಗ(ಬಿ)ದಿಂದ 2, ಮಹಿಳಾ ಕ್ಷೇತ್ರದಿಂದ 7, ಸಾಲಗಾರರಲ್ಲದ ಕ್ಷೇತ್ರದಿಂದ 5 ಅಭ್ಯರ್ಥಿಗಳು ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net