

ಸುಬ್ರಹ್ಮಣ್ಯ: ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಉಮೇಶ್ ಕೆ.ಎನ್.ಅಧ್ಯಕ್ಷತೆ ವಹಿಸಿದ್ದರು. ದೀಪೋತ್ಸವ ಸಮಿತಿನೂತನ ಅಧ್ಯಕ್ಷರಾಗಿ ಉಪನ್ಯಾಸಕ ಜಯಪ್ರಕಾಶ್ ಆರ್.ನೇಮಕಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಶೇಷಕುಮಾರ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಚರಣ್ ಕಾನಡ್ಕ, ಪ್ರಸನ್ನ ನೂಚಿಲ, ಉಪಾಧ್ಯಕ್ಷರಾಗಿ ಪ್ರಸನ್ನ ಮುಂಡೋಡಿ, ಜತೆ ಕಾರ್ಯದರ್ಶಿಯಾಗಿ ಸಂದೇಶ್ ಎಡೋಳಿ, ಕೋಶಾಧಿಕಾರಿಯಾಗಿ ದೀಪಕ್ ನಂಬಿಯಾರ್, ಸಹಕೋಶಾಧಿಕಾರಿಯಾಗಿ ಉಲ್ಲಾಸ್ ಕೇದಿಗೆಬನ, ಮಹೇಶ್ ಕೆ.ಸಿ, ಚಂದನ್, ಕಮಲಾ ಮಲ್ಲಿಗೆಮಜಲು, ಪ್ರೀತಮ್ ಸುಬ್ರಹ್ಮಣ್ಯ, ಉದಯ ಕುಮಾರ್ ನೂಚಿಲ, ನಿರ್ದೇಶಕರಾಗಿ ದಿನೇಶ್ ಮೊಗ್ರ, ಮಹಾಬಲೇಶ್ವರ ದೋಳ, ರವಿ ಅಗರಿಕಜೆ, ನವೀನ್ ಮಣಿ, ಸಂಚಾಲಕರಾಗಿ ಭರತ್ ನೆಕ್ರಾಜೆ ಆಯ್ಕೆಯಾದರು.