

ಶಿರಹಟ್ಟಿ: ಕರವೇ ಸ್ವಾಭಿಯಾನಿ ಸೇನೆ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ತಾಲೂಕಾಧ್ಯಕ್ಷರಾಗಿ ವೀರೇಶ ಪಸಾರದ, ಉಪಾಧ್ಯಕ್ಷರಾಗಿ ಮಂಜುನಾಥ ದೇಸಳ್ಳಿ , ಸಲ್ಮಾನ್ ಕುಂದೂರ, ಕಾರ್ಯಾಧ್ಯಕ್ಷರಾಗಿ ದೇವೇಂದ್ರ ಶಿಂಧೆ, ಕಾರ್ಯದರ್ಶಿಯಾಗಿ ನೂರುಲಷಾ ಮಕಾನದಾರ , ಸಹ ಕಾರ್ಯದರ್ಶಿಯಾಗಿ ನೂರಹ್ಮದ್ ಮುಳಗುಂದ, ರೈತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಡಾಲಾಯತ್, ರೈತ ಘಟಕದ ಉಪಾಧ್ಯಕ್ಷರಾಗಿ ಆನಂದ ಕಾರಕಟ್ಟಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಶರಣು ಗೂಡಿ ತಿಳಿಸಿದ್ದಾರೆ.
ಆಯ್ಕೆ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಅಡೂರ, ಅಜಯ ಕಂಬಳಿ, ಮುತ್ತಣ್ಣ ಮುಂಡವಾಡ, ಗೌಸಮೋದಿನ ಜಮಖಂಡಿ, ಮಹ್ಮದಲಿ ಶಿಗ್ಗಾಂವ, ಶರಣಪ್ಪ ಬಸಾಪುರ, ಫಕೀರಗೌಡ ಪಾಟೀಲ ಇತರರಿದ್ದರು.