

ತೇರದಾಳ: ಸ್ಥಳೀಯ ಜೆ.ವಿ. ಮಂಡಳ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೆನಿಸ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಎಸ್.ಎಸ್. ಕುಳ್ಳಿ ತಿಳಿಸಿದ್ದಾರೆ.
ಬಾಗಲಕೋಟೆ ತಂಡದ ಬಾಲಕರ ಪರವಾಗಿ ಆಯ್ಕೆಯಾದ ಕಾಲೇಜಿನ ಉಸ್ಮಾನ ಅತ್ತಾರ, ಮಹೇಶ ಗಸ್ತಿ, ಕಿರಣ ಮುಗಳಖೋಡ ಮತ್ತು ಬಾಲಕಿಯರ ತಂಡದಲ್ಲಿ ಮಾಯಕ್ಕ ಹೊಸೂರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉಪನ್ಯಾಸಕರಾದ ಉಮೇಶ ಹೊಸಕೋಟಿ, ನೇಮಿನಾಥ ಜಮಖಂಡಿ, ಶೇಖರ ದೊಡವಾಡ, ಎಂ.ಕೆ. ಮುರಗೋಡ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.