

ಮಳವಳ್ಳಿ: ತಾಲೂಕಿನ ರಾವಣಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 9 ನಿರ್ದೇಶಕರ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳು ವಿಜೇತರಾದರು.
ಗ್ರಾಮದ ಸಂಘದ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಒಟ್ಟು 11 ಸ್ಥಾನಗಳ ಪೈಕಿ ನಾಗಮ್ಮ, ಆರ್.ಕೆ.ನಾಗರಾಜು ಇಬ್ಬ್ಟರೂ ಅವಿರೋಧವಾಗಿ ಆಯ್ಕೆಯಾದರು. ಉಳಿದ 9 ಸ್ಥಾನಗಳಿಗೆ 17 ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದರು. ಸಂಘದಲ್ಲಿ ಮತದಾನದ ಹಕ್ಕು ಹೊಂದಿದ್ದ 284 ಮತದಾರರು ಮತ ಚಲಾಯಿಸಿ ಆಯ್ಕೆ ಮಾಡಿದರು.
ನಿರ್ದೇಶಕರಾಗಿ ಮಲ್ಲೇಶ್, ರಮೇಶ್, ಮರಿಮಾದಯ್ಯ, ಆರ್.ಸಿ.ವೆಂಕಟೇಶ್, ಎನ್.ಶೋಭಾ ಶಿವರಾಜು, ಎಂ.ಎಲ್. ಬಸವರಾಜು, ನಾಗಮ್ಮ, ಭಾರತಿ, ಸುರೇಶ ಚುನಾಯಿತರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಡಿ. ಆಶಾ ಕಾರ್ಯನಿರ್ವಹಿಸಿದರು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ವಿಜೇತರಿಗೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹೂಮಾಲೆ ಹಾಕಿ ಸಿಹಿ ತಿನಿಸಿ ಅಭಿನಂದಿಸಿದರು. ಕ್ಯಾತನಹಳ್ಳಿ ಸೊಸೈಟಿ ಅಧ್ಯಕ್ಷ ಶಿವಲಿಂಗಯ್ಯ, ಮುಖಂಡರಾದ ನಾಗಯ್ಯ, ಶಿವರಾಜ್, ಕೆಂಪಣ್ಣ, ಮಹಾದೇವಪ್ಪ, ನಂಜುಂಡೇಗೌಡ, ಪುಟ್ಟರಾಜು, ಎಂ.ನಾಗಯ್ಯ, ಕಾರ್ಯದರ್ಶಿ ನಂಜುಂಡಸ್ವಾಮಿ, ಹಾಲು ಪರೀಕ್ಷಕ ಶಂಭಯ್ಯ, ಸಹಾಯಕರಾದ ಆರ್.ಎನ್.ನವೀನ, ನಾಗೇಂದ್ರಗೌಡ ಇತರರಿದ್ದರು.