ಕೃತಿಕ ಬುದ್ಧಿಮತ್ತೆ ಜಾಗೃತಿಗಾಗಿ ಅಭ್ಯರ್ಥಿಗಳ ಆಯ್ಕೆ

10udp ai press meet
Published on

ಉಡುಪಿ: ಬೆಂಗಳೂರಿನ ಯತಿಕಾರ್ಪ್​ ಸಂಸ್ಥೆ ವತಿಯಿಂದ ರಾಜ್ಯಾದ್ಯಂತ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್​ ಇಂಟಲಿಜೆನ್ಸ್​) ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, 13ರಂದು ಮಣಿಪಾಲ ಯುನಿವರ್ಸಿಟಿ ವಾಣಿಜ್ಯ ವಿಭಾಗದಲ್ಲಿ ಸಂದರ್ಶನ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಯತಿರಾಜ್​ ಕೆ.ಎಸ್​. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಸ್ಥೆಯು ಪ್ರತಿ ತಾಲೂಕಿನಲ್ಲಿ 4 ಮಂದಿಯಂತೆ ರಾಜ್ಯದಲ್ಲಿ 1020 ಮಂದಿಯನ್ನು ಎಐ ರಿಜನಲ್​ ರೆಪ್ರಸೆಂಟೇಟಿವ್​ ಆಗಿ ನೇಮಕ ಮಾಡುತ್ತಿದ್ದು, ಅವರಿಗೆ ಎಐ ಬಗ್ಗೆ ಮಾಹಿತಿ ಜೊತೆಗೆ 6 ತಿಂಗಳ ಅಗತ್ಯ ತರಬೇತಿ ನೀಡಿಲಾಗುತ್ತದೆ. ನಂತರ 6 ತಿಂಗಳು ಎಐ ಬಗ್ಗೆ ಜನರಲ್ಲಿ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕ್ಷೇತ್ರಕಾರ್ಯ ನಡೆಸಬೇಕು. ನಂತರ ಅವರನ್ನು ಖಾಯಂ ಉದ್ಯೋಗಿಗಳಾಗಿ ನೇಮಿಸಲಾಗುತ್ತದೆ. ಆಯ್ಕೆಯಾದವರಿಗೆ 25 ರಿಂದ 30 ಸಾವಿರ ರೂ. ವೇತನ ನೀಡಲಾಗುತ್ತದೆ ಎಂದರು.

2015ರಲ್ಲಿ ಆರಂಭವಾದ ಯತಿಕಾರ್ಪ್​, 2019ರಲ್ಲಿ ಕಾಪೋರ್ರೇಟ್​ ಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸಿದೆ. ಭಾರತೀಯ ನೌಕಾಪಡೆ, ಕೈಗಾ ಅಣುಸ್ಥಾವರ, ಎಂಆರ್​ಪಿಎಲ್​ ಮತ್ತು ಅನೇಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸೇವೆ ನೀಡುತ್ತಿದ್ದು, ಶಿಕ್ಷಣ, ಉದ್ಯಮ ಸೇರಿದಂತೆ 33 ವಿವಿಧ ಕ್ಷೇತ್ರಗಳಿಗೆ ಎಐಯನ್ನು ಪರಿಚಯಿಸುವ ಮೂಲಕ ಈ ತಂತ್ರಜ್ಞಾನವನ್ನು ಸಾರ್ವತ್ರಿಕಗೊಳಿಸಲು ಮುಂದಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು, ಯುವಜನತೆಯನ್ನು ಸಜ್ಜುಗೊಳಿಸಿ, ಹೊಸ ಉದ್ಯೋಗಾವಕಾಶಗಳನ್ನು ತೆರೆದಿಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕಿ ಕೃಪಾ ಪ್ರಭು, ಮಾನವ ಸಂಪನ್ಮೂಲ ಅಧಿಕಾರಿ ಭೂಮಿಕಾ ಪೂಜಾರಿ, ಕಿರಣ್​ ಸಿ.ಸಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net