ಹಗರೆ ಕೃಷಿ ಪತ್ತಿನ ಸಂಘಕ್ಕೆ ಮೈತ್ರಿ ಅಭ್ಯರ್ಥಿಗಳ ಆಯ್ಕೆ

01 Hg Photo
ಹಗರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನಿದೇಶಕರನ್ನು ಶಾಸಕ ಎಚ್.ಕೆ.ಸುರೇಶ್ ಅಭಿನಂದಿಸಿದರು.
Published on

 ಹಗರೆ: ಹಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 12 ಜನ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಮೈತ್ರಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಮೈತ್ರಿ ಅಭ್ಯರ್ಥಿಗಳಾದ ಎಚ್.ಟಿ.ಮಹೇಶ್ ಮತ್ತು ರಾಜೇಗೌಡ ಇಬ್ಬರ ಅವಿರೋಧ ಆಯ್ಕೆಯಾಗಿತ್ತು. ಉಳಿದ 10 ನಿರ್ದೇಶಕ ಸ್ಥಾನಕ್ಕೆ ಒಟ್ಟು 17 ಜನ ಸ್ಪರ್ಧೆೆ ಮಾಡಿದ್ದರು. ಇದರಲ್ಲಿ ಎಸ್.ಕೆ.ಶಿವರಾಜು, ಎಚ್.ಎಂ.ಕಾಂತರಾಜು, ವಿಷ್ಣುಕುಮಾರ್, ಈಶ್ವರ್ ಪ್ರಸಾದ್, ಪೇಟೇಹಳ್ಳಿ ಸಂಕೇತ್, ರಾಜೇಶ್ವರಿ, ಜಗದೀಶ್, ರಂಗಮ್ಮ, ಕುಮಾರ್, ಶಿವಕುಮಾರ್ ಅತಿ ಹೆಚ್ಚು ಮತ ಪಡೆಯುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾದರು.

ನೂತನ ನಿರ್ದೇಶಕರಿಗೆ ಶುಭಕೋರಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಹಗರೆ, ಆಂದಲೆ, ಸವಾಸಿಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲ ಮುಖಂಡರು ಈ ಗೆಲುವಿಗೆ ಸಹಕರಿಸಿದ್ದಾರೆ. ವಿರೋಧ ಪಕ್ಷ ಇಲ್ಲದ ರೀತಿಯಲ್ಲಿ ಗೆಲುವು ದಾಖಲಿಸಿರುವುದು ಸಂತಸದ ವಿಷಯ. ಮೈತ್ರಿ ಪಕ್ಷದ ಅಭ್ಯರ್ಥಿಗಳ ಆಶಯವನ್ನು ಈಡೇರಿಸಲು ನಾನು ಸಹ ಕೈ ಜೋಡಿಸುತ್ತೇನೆ. ಬೇಲೂರಿನಲ್ಲಿ ಪ್ರಾಮಾಣಿಕತೆಯಿಂದ ಮೈತ್ರಿ ಮುನ್ನಡೆಯುತ್ತಿದೆ ಎನ್ನುವುದನ್ನು ಇಲ್ಲಿ ಸಾಕ್ಷೀಕರಿಸಿದೆ ಎಂದರು.

ಸಹಕಾರ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಯಿಸಿದರೆ ಹಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ, ಸಹಾಯಕರಾದ ರಘು, ಅಮೃತಾ, ಪ್ರವೀಣ್ ಹಾಜರಿದ್ದರು.

ನೂತನ ನಿರ್ದೇಶಕತನ್ನು ಬಿಜೆಪಿ ತಾಲೂಕು ಉಪಾಧ್ಯಕ್ಷ ಡಿಶಾಂತ್ ಕುಮಾರ್, ಮಾದೀಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ಆನಂದ್ ಇನ್ನಿತರರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net