

ಬೆಳಗಾವಿ: ಜುಲೈ 28ರಿಂದ ಚೀನಾ ದೇಶದಲ್ಲಿ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ಗಳಗೆ ಆಯ್ಕೆಯಾದ ಮಂಡೋಳಿ ಗ್ರಾಮದ ಯುವಕ ಶ್ರೀನಾಥ ದಳವಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಶುಭ ಕೋರಿದರು.
ಭಾನುವಾರ ಬೆಳಗಾವಿಯ ಅವರ ಮನೆಯಲ್ಲಿ ಸಚಿವರನ್ನು ಶ್ರೀನಾಥ ಅವರು ಭೇಟಿಯಾಗಿದ್ದರು. ಶ್ರೀನಾಥ ದಳವಿ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಶ್ರೀನಾಥ ಜಿಲ್ಲೆ ಮತ್ತು ರಾಜ್ಯದ ಹೆಮ್ಮೆ ಎಂದು ಹೆಬ್ಬಾಳಕರ್ ಬಣ್ಣಿಸಿದರು.