

ನಾಪೋಕ್ಲು: ಇಂಡೋನೇಷ್ಯಾದ ನೇಗೇರಿ ಸಮರಂಗ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಾನ್ಫರೆನ್ಸ್‌ನಲ್ಲಿ ಜುರೈಜ್ ನೂರಾನಿ ಕುಂಜಿಲ ಪ್ರಬಂಧ ಮಂಡನೆಗೆ ಆಯ್ಕೆಯಾಗಿದ್ದಾರೆ.
ಈ ಮೊದಲು ಅರ್ಥಶಾಸ್ತ್ರ ಮೈಕ್ರೋ ಫೈನಾನ್ಸ್‌ನಲ್ಲಿ ತನ್ನ ಸಂಶೋಧನಾ ಪ್ರಬಂಧಗಳನ್ನು ಬ್ರಿಟನ್‌ನ ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರಸ್ತುತ ಪಡಿಸಿದ್ದು ನಾಲೆಜ್ ಸಿಟಿಯ ಅಂತಾರಾಷ್ಟ್ರೀಯ ಕಾಲೇಜಿನ ಪಿ ಜಿ ವಿದ್ಯಾರ್ಥಿಯಾಗಿದ್ದು ಹಲವು ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸಿದ್ದರು. ಇವರು ಕುಂಜಿಲದ ಅಜೀಜ್ ಮಾಸ್ಟರ್ ಹಾಗೂ ಸುಮಯ್ಯ ದಂಪತಿ ಪುತ್ರ.