

ಭಟ್ಕಳ: ತಾಲೂಕಿನ ಬೀನಾ ವೈದ್ಯ ಇಂಟರನ್ಯಾಶನಲ್ ಪಬ್ಲಿಕ್ ಶಾಲೆಯ ರೋಷನಿ ಆಡಿಟೋರಿಯಮ್ಲ್ಲಿ ನಡೆದ 2024-2025 ನೇ ಸಾಲಿನ ಒಲಿಂಪಿಯಾಡ್ ಪರೀಕ್ಷೆಯಲ್ಲಿ 52 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
2024-2025ನೇ ಶೈಕ್ಷಣಿಕ ವರ್ಷದ ಒಲಿಂಪಿಯಾಡನಲ್ಲಿ 153 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಅದರಲ್ಲಿ 52 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 3 ವಿದ್ಯಾರ್ಥಿಗಳು ಒಲಿಂಪಿಯಾಡ್ ಟಾಪರ್ 76 ವಿದ್ಯಾರ್ಥಿಗಳು ವಲಯದಲ್ಲಿ ಟಾಪರ್ರಾಗಿ ಆಯ್ಕೆಯಾಗಿದ್ದಾರೆ. ಸುಮಾರು 80 ವಿದ್ಯಾರ್ಥಿಗಳು ಚಿನ್ನದ ಪದಕ 50 ವಿದ್ಯಾರ್ಥಿಗಳು ಬೆಳ್ಳಿ ಪದಕ ಹಾಗೂ 23 ವಿದ್ಯಾರ್ಥಿಗಳು ಕಂಚಿನ ಪದಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿ ಡಾ.ಪುಷ್ಪಲತಾ ಮಂಕಾಳ ವೈದ್ಯ, ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.