

ಭಾಗಮಂಡಲ:
ಸಮೀಪದ ಬಲ್ಲಮಾವಟಿ ಗ್ರಾಮದ ಎಡಿಕೇರಿ ವೇದಾಂತ್ ಯುಎಇ ನಲ್ಲಿ ನಡೆಯಲಿರುವ ಮಿನಿ ಫುಟ್ಬಾಲ್ ವರ್ಲ್ಡ್ ಕಪ್ ೨೦೨೩ರಲ್ಲಿ ಆಟವಾಡಲು ರಾಷ್ಟ್ರೀಯ ತಂಡದ ಪರವಾಗಿ ಆಯ್ಕೆಯಾಗಿದ್ದಾರೆ. ೩೨ ರಾಷ್ಟ್ರಗಳು ಭಾಗವಹಿಸುತ್ತಿರುವ ಈ ಟೂರ್ನಿ ಅ. ೨೬ ರಿಂದ ನ. ೪ರ ವರೆಗೆ ನಡೆಯಲಿದೆ. ವೇದಾಂತ್ ಪ್ರಸ್ತುತ ಬೆಂಗಳೂರಿನ ಬ್ಲೂ ಸ್ಟಾರ್ಸ್ ತಂಡದ ಪರ ಆಡುತ್ತಿದ್ದಾರೆ. ವೇದಾಂತ್ ಜತೆಯಲ್ಲಿ ಸೋಮವಾರಪೇಟೆಯ ಶಾಹಿಬ್ ಕೂಡ ಆಯ್ಕೆಯಾಗಿದ್ದಾರೆ. ವೇದಾಂತ್ ಬಲ್ಲಮಾವಟಿಯ ಎಡಿಕೇರಿ ಜಗನ್ನಾಥ್ ಮತ್ತು ವಸಂತಿ ಅವರ ಪುತ್ರ.