ಜಿಲ್ಲಾಮಟ್ಟದ ಥ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ: ಇಂದ್ರಪ್ರಸ್ಥ ವಿದ್ಯಾಲಯ ವಿದ್ಯಾರ್ಥಿಗಳ ತಂಡ ಸಾಧನೆ

New Project (8)
Published on

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೆ.19ರಂದು ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕುಮಟ್ಟದ ಥ್ರೋಬಾಲ್ ಪಂದ್ಯಾಟದ 17ರ ವಯೋಮಾನದ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸಾಧನೆಗೈದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಥಮ ಸ್ಥಾನ ಪಡೆದ ಬಾಲಕರ ವಿಭಾಗದಲ್ಲಿ ಚಿಂತನ್ ಕೆ.ಸಿ., ಆಯುಶ್, ಕವೀಶ್ ಬಿ.ಕೆ., ಅನ್ಮಯ್ ಶೆಟ್ಟಿ, ಅಕ್ಷಯ್ ಕೆ.ಎಸ್., ಸಾಯಿದೇವ ಹರ್ಷ, ಆಯತುಲ್ಲ ಸಲೀಂ, ಇರಾಝ್, ಪ್ರೀತಂ, ಮಹಮ್ಮದ್ ಇಮಾಮ್, ಸಕೇತ್, ಯಶ್ವಿತ್ ಹಾಗೂ ಪ್ರಥಮ ಸ್ಥಾನ ಪಡೆದ ಬಾಲಕಿಯರ ವಿಭಾಗದಲ್ಲಿ ಸವ್ಯ, ಅನ್ವಿ ಆಚಾರ್ಯ, ಅನುಶ್ರೀ, ಸೃಷ್ಟಿ, ತನ್ವಿ, ಸ್ತುತಿ, ಶ್ರೇಯಾ ಆರ್., ಧನ್ವಿ ಶೆಟ್ಟಿ ಹಾಗೂ ಲಾಸ್ಯ ಇದ್ದರು.

ಬಾಲಕರ ವಿಭಾಗದಲ್ಲಿ ಉತ್ತಮ ಎಸೆತಗಾರರಾಗಿ ಕವೀಶ್ ಬಿ.ಕೆ., ಸವ್ಯಸಾಚಿಯಾಗಿ ಚಿಂತನ್ ಕೆ.ಸಿ. ಹಾಗೂ ಬಾಲಕಿಯರ ವಿಭಾಗದ ಉತ್ತಮ ಹಿಡಿತಗಾರರಾಗಿ ಸೃಷ್ಟಿ, ಸವ್ಯಸಾಚಿಯಾಗಿ ಅನುಶ್ರೀ ಎಂ.ಎಸ್. ಪ್ರಶಸ್ತಿ ಪಡೆದರು. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್, ವಿದ್ಯಾ, ಶ್ರೀರಂಜಿನಿ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net