

ಕಾರ್ಕಳ: ಪಳ್ಳಿ ದಾದಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಅಂಕಿತ್ ಬೆಳ್ಮಣ್ ವೃತ್ತಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 200ಮೀ. ಓಟದಲ್ಲಿ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆಗೈದು ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಶಾಲಾ ವತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು.
ಮುಖ್ಯ ಶಿಕ್ಷಕಿ ಶೋಭಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಸಹ ಶಿಕ್ಷಕ ನಂದಳಿಕೆ ಚಂದ್ರಶೇಖರ ಭಟ್, ಶಿಕ್ಷಕಿಯರಾದ ರತ್ನವ್ವ, ಪೂರ್ಣಿಮಾ, ಆಶಾ, ಮರಿಯಾ ಜ್ಯೋತಿ ಉಪಸ್ಥಿತರಿದ್ದರು.