ಪ್ರತಿಭಾ ಕಾರಂಜಿಯಲ್ಲಿ ತಾಲೂಕುಮಟ್ಟಕ್ಕೆ ಆಯ್ಕೆ

GLD15-1
ಹಲಕುರ್ಕಿಯಲ್ಲಿ ಹಮ್ಮಿಕೊಂಡ ಪ್ರತಿಭಾ ಕಾರಂಜಿಯ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ ವಿದ್ಯಾಲಯದ ಮಕ್ಕಳು.
Published on

ಗುಳೇದಗುಡ್ಡ: ಹಲಕುರ್ಕಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಮೀಪದ ಚಿಕ್ಕಮುಚ್ಚಳಗುಡ್ಡ ಗ್ರಾಮದ ಆದರ್ಶ ಶಾಲೆ ವಿದ್ಯಾರ್ಥಿಗಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಸೃಷ್ಟಿ ರಜಪೂತ, ವಿದ್ಯಾ ದಾಸರ, ತನ್ವೀರ ಖಾಜಿ, ಮದನಕುಮಾರ ಪತ್ತಾರ, ಪ್ರದೀಪ ಗಾಜಿ, ಅಚ್ಯುತ್ ಅರಹುಣಸಿ, ಸಮರ್ಥ ಕ್ಯಾತನಗೌಡರ, ಪವನ ಹೊಸಮನಿ ಭಾಗವಹಿಸಿದ್ದರು. ಬಸವರಾಜ ಸಿಂದಗಿಮಠ ಮಾರ್ಗದರ್ಶನ ನೀಡಿದ್ದರು ಎಂದು ಪ್ರಾಚಾರ್ಯ ರಾಮಚಂದ್ರ ಭಜಂತ್ರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net