ಕಬಡ್ಡಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಹನುಮಸಾಗರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಚಾರ್ಯ ಅನಿಲ ಸಂಗಮ, ನಿಲಯ ಪಾಲಕ ಪ್ರಭಾಕರ ಮುದಗಲ್ಲ, ದೈಹಿಕ ಶಿಕ್ಷಣ ಶಿಕ್ಷಕಿ ಸುಧಾ ಗೌಡರ, ಸಿಬ್ಬಂದಿ ಇದ್ದರು.

Published on

ಹನುಮಸಾಗರ: ಪಟ್ಟಣದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳು ಮನ್ನೇರಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರೌಢ ಶಾಲೆಗಳ ಕಬಡ್ಡಿ ಹಾಗೂ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

800 ಮೀ. ಓಟದಲ್ಲಿ ಶಿವರಾಜ ಪರಸಾಪೂರ, 1500 ಮೀ. ಓಟದಲ್ಲಿ ಪ್ರದೀಪ ಮಾಲಿಪಾಟೀಲ್, 3000 ಮೀ. ಓಟದಲ್ಲಿ ಆಕಾಶ ತಳವಾರ ಪ್ರಥಮ ಸ್ಥಾನ ಗಳಿಸಿದ್ದಾರೆ. ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಮಂಜುನಾಥ ರಗಣಿ ಪ್ರಥಮ ಹಾಗೂ ಜಾವೆಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 400 ಮೀ. ಓಟದಲ್ಲಿ ಕಿರಣ ಪಾಟೀಲ ದ್ವಿತೀಯ, ಶಾಟ್‌ಪುಟ್‌ನಲ್ಲಿ ವರುಣ ಕುದರಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 100ಮೀ ಓಟ ಹಾಗೂ ಡಿಸ್ಕಸ್ ಥ್ರೋನಲ್ಲಿ ಪವನ ಹೊಸಮನಿ ತೃತೀಯ, ಡಿಸ್ಕಸ್ ಥ್ರೋನಲ್ಲಿ ಜ್ಯೋತಿ ಮೂಡದಿನ್ನಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಾಚಾರ್ಯ ಅನಿಲ ಸಂಗಮ, ನಿಲಯ ಪಾಲಕ ಪ್ರಭಾಕರ ಮುದಗಲ್ಲ, ದೈಹಿಕ ಶಿಕ್ಷಣ ಶಿಕ್ಷಕಿ ಸುಧಾ ಗೌಡರ, ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net