ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ: ಜ.6ರಿಂದ ನಡೆಯಲಿದೆ ಪ್ರಕ್ರಿಯೆ

sports hostel
Published on

ಮಂಡ್ಯ: ಪ್ರಸಕ್ತ ಸಾಲಿನ ಮಂಡ್ಯ ಕ್ರೀಡಾ ವಸತಿ ನಿಲಯಕ್ಕೆ 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಪ್ರವೇಶ ನೀಡಲು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.

ಜ.6ರಂದು ಕೆ.ಆರ್.ಪೇಟೆ, 7ರಂದು ನಾಗಮಂಗಲ, 8ರಂದು ಪಾಂಡವಪುರ, 9ರಂದು ಶ್ರೀರಂಗಪಟ್ಟಣ, 10 ಮಳವಳ್ಳಿ ಹಾಗೂ 16ರಂದು ಮದ್ದೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಿಗದಿತ ದಿನದಂದು ಬೆಳಗೆ 10.30ಕ್ಕೆ ಆಯಾಯ ತಾಲೂಕು ಕ್ರೀಡಾಂಗಣ ಹಾಗೂ 17ರಂದು ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್, ಫುಟ್ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಜೂಡೋ, ವಾಲಿಬಾಲ್, ಕುಸ್ತಿ (ಪುಟ್ಬಾಲ್ ಕ್ರೀಡೆ ಬಾಲಕರಿಗೆ ಮಾತ್ರ) ಕ್ರೀಡೆ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿದೆ. ಅಂತೆಯೇ ಪ್ರತಿ ತಾಲೂಕಿನಿಂದ ಆಯ್ಕೆಯಾದ ಕ್ರೀಡಾಪಟುಗಳು ಫೆ.13 ಮತ್ತು 14ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಆಯ್ಕೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸುತ್ತಾರೆ. ಇಲ್ಲಿ ಆಯ್ಕೆಯಾದ ಕ್ರೀಡಾಪಟುಗಳು 2025-26ನೇ ಸಾಲಿನಲ್ಲಿ 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಪ್ರವೇಶ ಪಡೆಯುತ್ತಾರೆ. ಮಾಹಿತಿಗೆ ಮೊ.ಸಂ ಬಿ.ಸೋಮಶೇಖರ್(9740896699), ಸಿ.ಬಿ.ಭರತ್‌ರಾಜ್(9916644007) ಮತ್ತು ಕೆ.ಜೆ.ರೂಪಶ್ರೀ(7353097540) ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net